ಮದ್ದೂರು ತಾಲೂಕು ನೌಕರರ ಬಳಕೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಕೃಷ್ಣ, ಉಪಾಧ್ಯಕ್ಷರಾಗಿ ಎಚ್.ಆರ್.ನಾಗೇಂದ್ರ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾದರು. ಕಾಂತರಾಜು, ಎಂ.ಎ.ರಾಮಲಿಂಗಯ್ಯ, ಮೂಗೂರಯ್ಯ, ಎಂ.ಟಿ.ಚಂದ್ರಶೇಖರ, ವೈ.ಎಸ್.ರತ್ನಾ, ಬಿ.ಜಿ.ನಾರಾಯಣಗೌಡ, ಸಿ.ಎಂ.ಸತೀಶ್ ಕುಮಾರ್, ಡಿ.ಎಚ್.ಸುಬ್ರಹ್ಮಣ್ಯ, ಡಿ.ಎನ್.ನಾಗರಾಜು, ಎಂ.ಎಸ್.ಪೂರ್ಣಿಮಾ, ಎಂ.ಎನ್.ಜವರಾಯಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉಪಾಧ್ಯಕ್ಷರಾಗಿ ಎಚ್.ಆರ್.ನಾಗೇಂದ್ರಕುಮಾರ್ ಆಯ್ಕೆ
ಮದ್ದೂರು: ಮದ್ದೂರು ತಾಲೂಕು ನೌಕರರ ಬಳಕೆದಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಕೃಷ್ಣ, ಉಪಾಧ್ಯಕ್ಷರಾಗಿ ಎಚ್.ಆರ್.ನಾಗೇಂದ್ರಕುಮಾರ್ ಅವಿರೋಧವಾಗಿ ಶನಿವಾರ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳಾದ ಎಂ.ಸುಜಾತಾ, ಕಾರ್ಯದರ್ಶಿ ನಂದೀಶ್ ಇವರ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎನ್.ಕೃಷ್ಣ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಮದ್ದೂರು ತಾಲೂಕು ನೌಕರರ ಬಳಕೆದಾರರ ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಂಘದ ಷೇರುದಾರರಿಗೆ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಸಂಘದ ನಿರ್ದೇಶಕರಾದ ಕಾಂತರಾಜು, ಎಂ.ಎ.ರಾಮಲಿಂಗಯ್ಯ, ಮೂಗೂರಯ್ಯ, ಎಂ.ಟಿ.ಚಂದ್ರಶೇಖರ, ವೈ.ಎಸ್.ರತ್ನಾ, ಬಿ.ಜಿ.ನಾರಾಯಣಗೌಡ, ಸಿ.ಎಂ.ಸತೀಶ್ ಕುಮಾರ್, ಡಿ. ಎಚ್.ಸುಬ್ರಹ್ಮಣ್ಯ, ಡಿ.ಎನ್.ನಾಗರಾಜು, ಎಂ.ಎಸ್.ಪೂರ್ಣಿಮಾ, ಎಂ.ಎನ್.ಜವರಾಯಿ ಉಪಸ್ಥಿತರಿದ್ದರು.