2019ರಲ್ಲಿ 80.56 ಅಡಿ, 2020ರಲ್ಲಿ 92.16 ಅಡಿ, 2021ರಲ್ಲಿ 84.20 ಅಡಿ, 2022ರಲ್ಲಿ 105.38 ಅಡಿ, 2023ರಲ್ಲಿ 82.30 ಅಡಿ, 2024ರಲ್ಲಿ 85.08 ಅಡಿ, 2025ರಲ್ಲಿ 108.26 ಅಡಿ ನೀರಿನ ಸಂಗ್ರಹವಿತ್ತು. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತ ಹೋದರೆ, ಮುಂದಿನ ದಿನಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಯುವುದು ಕಷ್ಟ ಸಾಧ್ಯವಾಗಲಿದೆ. ಕಾವೇರಿ ನೀರನ್ನೇ ಅವಲಂಬಿಸಿರುವ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗೆ ಪ್ರತಿನಿತ್ಯ ಸುಮಾರು 1100 ಕ್ಯುಸೆಕ್ ಬೇಕಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸೇರಿದಂತೆ ಅಣೆಕಟ್ಟೆಯಲ್ಲಿ ಜಲಚರಗಳಿಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.