ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಹಸಿವಿನಿಂದ ಇರುವ ಎಲ್ಲರ ಹೊಟ್ಟೆ ತುಂಬಿಸೋದೆ ರೈತರು. ಜಮೀನಿನಲ್ಲಿ ನಾಟಿ ಹಾಕಿ, ಕಳೆ ಕೀಳೋ ರೈತರಿಗೆ ಸನ್ಮಾನ ಮಾಡದೆ ರಾಜಕೀಯ ನಾಯಕರಿಗೆ ಹಾರ, ತುರಾಯಿ ಹಾಕಲು ಹಿಡಿದುಕೊಂಡು ರೈತರೆ ಮುಂದೆ ಇರುತ್ತಾರೆ, ಇದು ವಿಪರ್ಯಾಸ. ರೈತರ ಕಷ್ಟ ಇಂದಿನ ರಾಜಕಾರಣಿಗಳಿಗೆ ತಿಳಿದಿಲ್ಲ. ಸರ್ಕಾರವೇ ರೈತ ದಿನವನ್ನು ಆಚರಿಸಬೇಕು. ಆದರೆ, ಆಚರಣೆ ಮಾಡುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.