ಛತ್ರದಹೊಸಹಳ್ಳಿ ಅಭಿವೃದ್ಧಿಗೆ ಶ್ರಮಿಸುವೆ

ಛತ್ರದಹೊಸಹಳ್ಳಿ ಗ್ರಾಮದಲ್ಲಿ 8 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭೂಮಿಪೂಜೆ ನೆರವೇರಿಸಿದರು. ತಾಪಂ ಮಾಜಿ ಸದಸ್ಯ ಭರತೇಶ್, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮಣಿಗೆರೆ  ಕೆ.ಕಬ್ಬಾಳಯ್ಯ, ಗ್ರಾಪಂ ಅಧ್ಯಕ್ಷೆ ಕಮಲಮ್ಮ ಬೋರೇಗೌಡ ಮತ್ತಿತರರಿದ್ದರು.
ಛತ್ರದಹೊಸಹಳ್ಳಿ ಗ್ರಾಮದಲ್ಲಿ 8 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭೂಮಿಪೂಜೆ ನೆರವೇರಿಸಿದರು. ತಾಪಂ ಮಾಜಿ ಸದಸ್ಯ ಭರತೇಶ್, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮಣಿಗೆರೆ ಕೆ.ಕಬ್ಬಾಳಯ್ಯ, ಗ್ರಾಪಂ ಅಧ್ಯಕ್ಷೆ ಕಮಲಮ್ಮ ಬೋರೇಗೌಡ ಮತ್ತಿತರರಿದ್ದರು.
Published on
ಕೆ.ಎಂ.ದೊಡ್ಡಿ: ಛತ್ರದಹೊಸಹಳ್ಳಿ ಗ್ರಾಮದ ಬಗ್ಗೆ ನನ್ನ ತಂದೆ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಪ್ರೀತಿಯ ದತ್ತು ಗ್ರಾಮವಾಗಿತ್ತು. ಆದ್ದರಿಂದ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭರವಸೆ ನೀಡಿದರು.
ಸಮೀಪದ ಛತ್ರದಹೊಸಹಳ್ಳಿ ಗ್ರಾಮದಲ್ಲಿ 8 ಲಕ್ಷ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ತಂದೆ ಮೇಲೆ ಇಟ್ಟಿದ್ದ ಪ್ರೀತಿ, ವಿಶ್ವಾಸ ನನ್ನ ಮೇಲೂ ಇರಲಿ ನಿಮ್ಮ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದರು.
ಛತ್ರದಹೊಸಹಳ್ಳಿ ಗ್ರಾಮ ಮತ್ತು ತವರೂ ಗ್ರಾಮ ಗುರುದೇವರಹಳ್ಳಿಗೂ ನನ್ನ ತಂದೆಯವರ ಕಾಲದಿಂದಲೂ ಅವಿನಾಭಾವ ಸಂಬಂಧವಿದ್ದು, ಗ್ರಾಮದ ಅಭಿವೃದ್ಧಿಗೆ ನಾನು ಸದಾ ಮುಂದಾಗಿರುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯನಾದ ನಂತರ ನನ್ನ ವ್ಯಾಪ್ತಿಯ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದು, ಇನ್ನು ಉಳಿದ ಮೂರು ವರ್ಷಗಳಲ್ಲಿ ಮತ್ತಷ್ಟು ಹಣ ನೀಡಿ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು.
ತಾಪಂ ಮಾಜಿ ಸದಸ್ಯ ಭರತೇಶ್ ಮಾತನಾಡಿ, ಮಾಜಿ ಸಂಸದ ದಿವಂಗತ ಜಿ.ಮದೇಗೌಡರಿಗೆ ನಮ್ಮ ಗ್ರಾಮದ ಬಗ್ಗೆ ವಿಶೇಷ ಅಭಿಮಾನವಿತ್ತು. ಗ್ರಾಮಸ್ಥರೂ ಅವರ ಬೆಂಬಲಕ್ಕೆ ಸಂಪೂರ್ಣವಾಗಿ ನಿಲ್ಲುತಿತ್ತು. ಅದೇ ರೀತಿ ಎಂಎಲ್ಸಿ ಮಧು ಜಿ.ಮಾದೇಗೌಡ ಅವರೊಂದಿಗೆ ಇದ್ದು ಅವರ ಬೆನ್ನೆಲುಬಾಗಿ ಸದಾ ನಿಲ್ಲುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಎಂಎಲ್ಸಿ ಮಧು ಜಿ.ಮಾದೇಗೌಡ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮಣಿಗೆರೆ ಕೆ.ಕಬ್ಬಾಳಯ್ಯ, ಗ್ರಾಪಂ ಅಧ್ಯಕ್ಷೆ ಕಮಲಮ್ಮ ಬೋರೇಗೌಡ, ಮಾಜಿ ಅಧ್ಯಕ್ಷೆ ರಂಜಿನಿ ಭರತೇಶ್, ಮಾಜಿ ಉಪಾಧ್ಯಕ್ಷೆ ಮಣಿಲಾ ವೆಂಕಟಸ್ವಾಮಿ, ಮಾಜಿ ಸದಸ್ಯರಾದ ಎಚ್.ಎಂ.ಶಿವಕುಮಾರ್, ಸಿ.ಕೆ.ನಾಗರಾಜು, ಯಜಮಾನರಾದ ಯಜಮಾನ್‌ಚಿಕ್ಕಣ್ಣ, ಮರಿಗೌಡ,ಬಿರೇಶ್, ಪುಟ್ಟಸ್ವಾಮಿ, ಚಿಕ್ಕಮರೀಗೌಡ, ಕೆ.ಬೀರಪ್ಪ, ಮುಖಂಡರುಗಳಾದ ಕರಿಚಿಕ್ಕಹೆಗ್ಡೆ, ಶಿವು, ವೀರಯ್ಯ, ಎಂ.ಲೋಕೇಶ್, ಸಿ.ಪಿ.ನಾಗರಾಜು, ಚೇತನ್ ಎಚ್.ಬಿ.ಸಿದ್ದಯ್ಯ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net