

ಬಡ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ
ಹಲಗೂರು: ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಮತ್ತು ಶ್ರದ್ಧೆ ಇದ್ದವರಿಗೆ ವಿದ್ಯೆ ನೀಡುವುದು
ಪುಣ್ಯದ ಕೆಲಸ ಎಂದು ನಿವೃತ್ತ ಮುಖ್ಯ ಶಿಕ್ಷಕ ಸುಂದರಪ್ಪ ಹೇಳಿದರು.
ಮುತ್ತತ್ತಿ ರಸ್ತೆಯಲ್ಲಿರುವ ಕರೀಗೌಡನ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ 9 ಬಡ ವಿದ್ಯಾರ್ಥಿಗಳ ಕುಟುಂಬಕ್ಕೆ ಅಕ್ಕಿ, ಬೇಳೆ, ಸೋಪು ಸಹಿತ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದರು. ಶಿಕ್ಷಕ ವೃತ್ತಿಯಲ್ಲಿದ್ದಾಗಲೂ ಅಂಗವಿಕಲರು, ಬಡವರಿಗೆ ಕೈಲಾದ ಸಹಾಯ ಮಾಡುತ್ತಿದ್ದೆ. ಅದಕ್ಕೆ ಮಿತ್ರರ ಸಹಾಯವನ್ನೂ ಪಡೆಯುತ್ತಿದ್ದೆ. ನಿವೃತ್ತಿಯ ನಂತರವೂ ಇಂತಹ ಸಮಾಜಮುಖಿ ಕಾರ್ಯಗಳನ್ನು ಅನಿಕೇತನ ಲಯನ್ಸ್ ಸಂಸ್ಥೆ ಸಹಯೋಗದೊಂದಿಗೆ ನಿರ್ವಹಿಸುತ್ತಿದ್ದೇನೆ ಎಂದರು.
ದುಂದುವೆಚ್ಚ ಬೇಡ: ಅನಿಕೇತನ ಲಯನ್ಸ್ ಕ್ಲಬ್ ಅಧ್ಯಕ್ಷ ಮೂರ್ತಿ ಮಾತನಾಡಿ, ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಸಂಘ ಸಂಸ್ಥೆಗಳ ಸಮಾರಂಭ ಇತ್ಯಾದಿ ಸಂದರ್ಭದಲ್ಲಿ ದುಂದು ವೆಚ್ಚ ಮಾಡುವ ಬದಲು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಪಿ.ರಾಧಾ, ಶಿಕ್ಷಕಿಯರಾದ ಲೀಲಾವತಿ, ಕೆ.ಎಸ್.ಸೌಮ್ಯಾ, ಚೈತ್ರಾ ಇತರರು ಇದ್ದರು.
ಕ