ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಪಂ ಮುಂದೆ ಕರ್ನಾಟಕ ಪ್ರಾಂತ ಕೃಷಿ ಮತ್ತು ಗ್ರಾಮೀಣ ಕೂಲಿಕಾರರ ಸಂಘದವರು ಕೇಂದ್ರ ಸರ್ಕಾರ ನರೇಗಾ ಹೆಸರು ಬದಲಾಯಿಸಲು ಮುಂದಾಗಿರುವುದನ್ನು ಖಂಡಿಸಿ ಶುಕ್ರವಾರ ಪ್ರತಿಭಟಿಸಿದರು. ಗಿರೀಶ್, ಕರಿಯಣ್ಣ, ಕುಮಾರ, ಮಂಜಣ್ಣ, ದೇವರಾಜು, ಸುಧಾ, ಮಂಜಮ್ಮ, ಪಲ್ಲವಿ ಮತ್ತಿತರರಿದ್ದರು.
Published on:
Copied
Follow Us
ಕಿಕ್ಕೇರಿ: ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ನಿಷ್ಕ್ರಿಯಗೊಳಿಸಲು ಮಹಾತ್ಮ ಗಾಂಧೀಜಿ ಹೆಸರನ್ನು ಬದಲಿಸಿ ವಿಬಿ-ಜಿ-ರಾಂ ಜಿ ಹೆಸರಿನಲ್ಲಿ ಹೊಸ ಶಾಸನ ತರಲು ಮುಂದಾಗಿರುವುದು ತರವಲ್ಲ ಎಂದು ರಾಜ್ಯ ಕೃಷಿ ಪ್ರಾಂತ ಕೂಲಿಕಾರ ಸಂಘದ ತಾಲೂಕು ಕಾರ್ಯದರ್ಶಿ ಗಂಗೇನಹಳ್ಳಿ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಹೋಬಳಿಯ ಲಕ್ಷ್ಮೀಪುರ ಗ್ರಾಪಂ ಕಚೇರಿ ಮುಂದೆ ಶುಕ್ರವಾರ ರಾಜ್ಯ ಪ್ರಾಂತ ಕೃಷಿ ಕೂಲಿಕಾರ ಸಂಘದ ಸದಸ್ಯರು ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾಯಿಸಲು ಮುಂದಾಗಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತ, ಗಾಂಧೀಜಿ ಅವರ ಹೆಸರು ತೆಗೆದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಬದಲಾಯಿಸಲು ಮುಂದಾಗಿರುವುದು ರಾಜಕೀಯಕರ ಕಾಯ್ದೆ ಆಗಿದೆ ಎಂದರು.
ಈ ಹಿಂದೆ ನರೇಗಾಗೆ ಶೇ.90ರಷ್ಟು ಕೂಲಿ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಈಗ ಹೊಸ ಕಾಯ್ದೆ ರೀತಿ ಶೇ.60 ಕೇಂದ್ರ ಸರ್ಕಾರ, ಶೇ.40ರಷ್ಟು ರಾಜ್ಯ ಸರ್ಕಾರ ನೀಡಬೇಕಿದೆ. ಜತೆಗೆ ಯಾವುದೇ ಜಿಲ್ಲೆಗಳಲ್ಲಿ ಆಯಾ ರಾಜ್ಯದ ಕೂಲಿಕಾರರು ಕೂಲಿಗೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಸ್ಥಳೀಯ ಕೂಲಿಕಾರರ ಬದುಕಿನ ಹಕ್ಕು ಕಿತ್ತುಕೊಳ್ಳುವಂತಾಗಿದೆ ಎಂದು ಕಿಡಿಕಾರಿದರು.
ಈ ಹಿಂದೆ ಕೃಷಿ ಕೂಲಿ ಕಾರ್ಮಿಕರಿಗೆ ಇದ್ದ 370ರೂ.ಕೂಲಿ ಬದಲಿಗೆ 240ರೂ.ಗೆ ಕಡಿತಗೊಳಿಸಲು ಮುಂದಾಗಿರುವುದು ಕಾರ್ಮಿಕರ ಹೊಟ್ಟೆ ಮೇಲೆ ಬರೆಹಾಕುವಂತಾಗಿದೆ. ಇಂತಹ ಧೋರಣೆ ಬಿಟ್ಟು ನರೇಗಾ ಕಾರ್ಮಿಕರಿಗೆ ಬದುಕಿಗೆ ಭದ್ರತೆ ನೀಡುವ ಕಾಯ್ದೆ ತರಲಿ ಎಂದು ಒತ್ತಾಯಿಸಿದರು.
ನರೇಗಾ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಪಿಡಿಒ ಸುರೇಶ್‌ಬಾಬು ಮೂಲಕ ಮನವಿ ಸಲ್ಲಿಸಿದರು.