ದೇಗುಲಗಳಲ್ಲಿ ಭೀಮನ ಅಮಾವಾಸ್ಯೆ ಪೂಜೆ

ಕಿಕ್ಕೇರಿಯಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಬ್ರಹ್ಮೇಶ್ವರ ದೇವರಿಗೆ ಬುಧವಾರ ವಿಶೇಷ ಅಲಂಕಾರ ಮಾಡಲಾಗಿತ್ತು.
ಕಿಕ್ಕೇರಿಯಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಬ್ರಹ್ಮೇಶ್ವರ ದೇವರಿಗೆ ಬುಧವಾರ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಕಿಕ್ಕೇರಿ:

ಹೋಬಳಿಯ ವಿವಿಧ ಶಕ್ತಿ ದೇಗುಲಗಳಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಬುಧವಾರ ವಿಶೇಷ ಪೂಜೆ ಹಾಗೂ ಮನೆಗಳಲ್ಲಿ ಪತಿಯ ಪಾದಪೂಜೆ ಸಂಭ್ರಮದಿಂದ ಜರುಗಿತು.

ಬ್ರಹ್ಮೇಶ್ವರ ದೇಗುಲ, ಪಾರ್ವತಿ, ಅಂಗಾಳ ಪರಮೇಶ್ವರಿ, ಮಹಾಲಕ್ಷ್ಮೀದೇವಿ, ಸಿಂಗಮ್ಮ ದೇಗುಲ, ಚಿಕ್ಕರಳೆಯ ಚಿಕ್ಕಳಮ್ಮ, ಲಕ್ಷ್ಮೀದೇವಿ ದೇಗುಲ, ಬೇವಿನಹಳ್ಳಿಯ ಚಾಮುಂಡೇಶ್ವರಿ, ಮಂದಗೆರೆಯ ಅಂಗಾಳ ಪರಮೇಶ್ವರಿ, ಗದ್ದೆಹೊಸೂರಿನ ಗುಂಡಪಟ್ಟಲದಮ್ಮ ಮತ್ತಿತರ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಅರ್ಚನೆಗಳು ನಡೆದವು.
ಅಂಗಾಳಪರಮೇಶ್ವರಿ ದೇಗುಲದ ಅರ್ಚಕ ವಿಜಯಕುಮಾರ್ ಗಂಗಾಸ್ನಾನ ಮಾಡಿ ಮಡಿಯೊಂದಿಗೆ ದೇವಿಗೆ ಪಂಚಾಮೃತ ಹಾಗೂ ಕೆಂಪು ಅಕ್ಕಿಯಿಂದ ಹೊಸ ಪಾತ್ರೆಗಳಲ್ಲಿ ವಿಶೇಷವಾಗಿ ಗಂಜಿ ತಯಾರಿಸಿ ಅಮ್ಮನವರಿಗೆ ಗಂಜಿ ನೈವೇದ್ಯ ಹಾಗೂ ಅಭಿಷೇಕ ನೆರವೇರಿಸಿದರು.
ವಿವಿಧ ಪುಷ್ಪ, ವಸ್ತ್ರಾಭರಣಗಳಿಂದ ಸಿಂಗರಿಸಿ ತೋಮಾಲೆ ಪೂಜೆ ಮಾಡಿದರು. ಗಂಗಮ್ಮ ದೇವಿ ಹಾಗೂ ಅಂಗಾಳಪರಮೇಶ್ವರಿಗೆ ಧೂಪ ದೀಪದಾರತಿ ಬೆಳಗಿ, ಮಂಗಳದ್ರವ್ಯದೊಂದಿಗೆ ಪೂಜೆ ಸಮರ್ಪಿಸಿದರು.
ಸುಮಂಗಲಿಯರು ದೇವಿಗೆ ಆರತಿ ಬೆಳಗಿದರು.ಅಂಬಲಿ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.
ಹೋಬಳಿಯಾದ್ಯಂತ ಮನೆಗಳಲ್ಲಿ ಸುಮಂಗಲಿಯರು ಮನೆದೇವರನ್ನು ಪೂಜಿಸಿ ತಮ್ಮ ಗಂಡಂದಿರಿಗೆ ಪಾದಪೂಜೆ ಮಾಡಿ, ಜ್ಯೋರ್ತಿಭೀಮೇಶ್ವರ ವ್ರತ ಪೂಜೆ ಆಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net