ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೌಕರ್ಯ ಕಲ್ಪಿಸಲು ಆಗ್ರಹ

ಮದ್ದೂರು ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಹಾಗೂ ರೋಗಿಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆಯಿಂದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು. ರಾಮಚಂದ್ರೇಗೌಡ, ಬೋರೇಗೌಡ, ಗೀತಾ, ಮಹಾದೇವು, ಮಂಜೇಶ್ ಇದ್ದರು.
ಮದ್ದೂರು ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಹಾಗೂ ರೋಗಿಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆಯಿಂದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು. ರಾಮಚಂದ್ರೇಗೌಡ, ಬೋರೇಗೌಡ, ಗೀತಾ, ಮಹಾದೇವು, ಮಂಜೇಶ್ ಇದ್ದರು.
Published on
ಮದ್ದೂರು: ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಹಾಗೂ ರೋಗಿಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷವೇದಿಕೆಯಿಂದ ಆಸ್ಪತ್ರೆ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ವೇದಿಕೆ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಮಾತನಾಡಿ, ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಬಡ, ಮಧ್ಯಮ ವರ್ಗದವರು ಹಾಗೂ ರೈತರು ಚಿಕಿತ್ಸೆಗಾಗಿ ಬರುತ್ತಾರೆ. ಮೂಲಸೌಕರ್ಯವಿಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ದ್ವಾರದಲ್ಲಿ ಯಾವ ವೈದ್ಯರು ಲಭ್ಯವಿರುತ್ತಾರೆ ಅವರ ವಿಭಾಗ ಯಾವುದು ಮತ್ತು ಸಮಯದ ವಿವರಗಳನ್ನು ಒಳಗೊಂಡ ಮತ್ತು ಆಸ್ಪತ್ರೆಯಲ್ಲಿ ಲಭ್ಯವಿರುವ ಮತ್ತು ದಾಸ್ತಾನು ಇಲ್ಲದ ಔಷಧಗಳ ಬಗ್ಗೆ ನಾಮಫಲಕಗಳನ್ನು ಅಳವಡಿಸುವಂತೆ ಆಗ್ರಹಿಸಿದರು.
ವೈದ್ಯರು ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆದು ಕೊಡಬಾರದು. ಆಸ್ಪತ್ರೆಯಲ್ಲೇ ಔಷಧ ನೀಡಬೇಕು. ಲಭ್ಯವಿಲ್ಲದಿದ್ದರೆ ರೋಗಿಗಳು ಹೊರಗೆ ಖರೀದಿಸಿದ ಬಿಲ್ ಆಧಾರದ ಮೇಲೆ ಆಸ್ಪತ್ರೆಯ ತುರ್ತು ನಿಧಿಯಿಂದ ರೋಗಿಗಳಿಗೆ ವಾಪಸ್ ಹಣ ನೀಡಬೇಕು ಎಂದರು.
ಆಸ್ಪತ್ರೆ ಉಸ್ತುವಾರಿ ನೋಡಿಕೊಳ್ಳಬೇಕಾದ ಆರೋಗ್ಯ ರಕ್ಷಾ ಸಮಿತಿ ನಿಷ್ಕ್ರಿಯವಾಗಿದೆ. ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು. ಶೀಘ್ರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಾತಿನ ಚಕಮಕಿ: ಪ್ರತಿಭಟನಾ ಸ್ಥಳಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಆಗಮಿಸಿದ ವೇಳೆ ಪ್ರತಿಭಟನಾಕಾರರು ಹಾಗೂ ಆಡಳಿತಾಧಿಕಾರಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬೋರೇಗೌಡ, ಗಿರೀಶ್, ಮಹಾದೇವು, ಗೀತಾ, ಮಂಜೇಶ್, ವಸಂತಮ್ಮ, ಉಮೇಶ್, ತೇಜು, ಹರೀಶ್, ಶಿವಮಾದು, ಸತೀಶ್, ಉದಯ್, ಅನಿಲ್, ನಾಗಲಿಂಗ, ನಾಗೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net