ಭಾಷೆ ಉಳಿದರೆ ದೇಶ ಸಂಪದ್ಭರಿತ

ಕೆ.ಎಂ.ದೊಡ್ಡಿ ಭಾರತೀ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸಕ ಶಿವಲಿಂಗೇಗೌಡ, ಡಾ.ಎಂ.ಎಸ್.ಮಹದೇವಸ್ವಾಮಿ, ಅರ್ಚನಾ, ಬಿ.ಕೆ.ಕೃಷ್ಣ, ಡಾ.ಎಂ.ಪಿ.ತೇಜೇಶ್ ಕುಮಾರ್ ಇದ್ದರು.
ಕೆ.ಎಂ.ದೊಡ್ಡಿ ಭಾರತೀ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸಕ ಶಿವಲಿಂಗೇಗೌಡ, ಡಾ.ಎಂ.ಎಸ್.ಮಹದೇವಸ್ವಾಮಿ, ಅರ್ಚನಾ, ಬಿ.ಕೆ.ಕೃಷ್ಣ, ಡಾ.ಎಂ.ಪಿ.ತೇಜೇಶ್ ಕುಮಾರ್ ಇದ್ದರು.
Published on
ಕೆ.ಎಂ.ದೊಡ್ಡಿ: ಆಧುನಿಕ ಕರ್ನಾಟಕವನ್ನು ಕಟ್ಟಲು ಆಲೂರು ವೆಂಕಟರಾಯರು, ಗಳಗನಾಥರು ಸಾಕಷ್ಟು ಶ್ರಮಿಸಿದ್ದಾರೆ. ಇವರೇ ಕನ್ನಡ ಬದುಕಿಗೆ ನಿಜವಾದ ಕೊಡುಗೆ ಸಲ್ಲಿಸಿದವರು ಎಂದು ಹನುಮಂತನಗರದ ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಲಿಂಗೇಗೌಡ ಹೇಳಿದರು.
ಭಾರತೀ ಕಾಲೇಜಿನ ಗ್ರಂಥಾಲಯದ ಆವರಣದಲ್ಲಿ ಇತ್ತೀಚೆಗೆ ಭಾರತೀ ಕಾಲೇಜು, ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಗಳಗನಾಥರು 20ನೇ ಶತಮಾನದಲ್ಲೇ ವೈವಿಧ್ಯಮಯ ಕನ್ನಡ ಸಾಹಿತ್ಯ ರಚಿಸಿ ಅವುಗಳನ್ನು ತಲೆ ಮೇಲೆ ಹೊತ್ತು ಊರೂರು ತಿರುಗಿ ಕನ್ನಡಿಗರ ವಾಚಾನಾಭಿರುಚಿಯ ಬೆಳವಣಿಗೆಗೆ ಅಸ್ತಿವಾರ ಹಾಕಿದರು. ಸರ್ಕಾರಿ ಸೇವೆ ತ್ಯಜಿಸಿ ಮುದ್ರಣಾಲಯ ಸ್ಥಾಪಿಸಿ, ಪತ್ರಿಕೆ ನಡೆಸುವ ಸಾಹಸ ಮಾಡಿದರು. ಸಂಕಷ್ಟದ ಸಮಯದಲ್ಲಿ ನುಡಿ ಸೇವೆಯಲ್ಲೇ ತಮ್ಮ ಜೀವ ತೇಯ್ದುರು. ಕನ್ನಡ ಭಾಷೆ, ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಭಾಷೆ ಉಳಿದರೆ ದೇಶ ಸಂಪದ್ಭರಿತವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸಬೇಕು ಎಂದು ಸಲಹೆ ನೀಡಿದರು.
ಡಾ.ಎಂ.ಎಸ್.ಮಹದೇವ ಸ್ವಾಮಿ ಮಾತನಾಡಿ, ಬ್ಯಾಂಕ್‌ನಲ್ಲಿ ಇತ್ತೀಚೆಗೆ ಕನ್ನಡ ಬಳಕೆ ಕಡಿಮೆಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡವನ್ನು ಬಳಸಿದರೆ ಭಾಷೆ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.
ಇದೇ ವೇಳೆ ಶಾಲಾ ಮಕ್ಕಳು ನಾಡು-ನುಡಿಯ ಅಭಿಮಾನ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು. ಸಂಚಾಲಕರಾದ ಅರ್ಚನಾ, ಬಿ.ಕೆ.ಕೃಷ್ಣ, ಐಕ್ಯೂಎಸಿ ಸಂಯೋಜಕ ಡಾ.ಎಂ.ಪಿ.ತೇಜೇಶ್ ಕುಮಾರ್, ನಿಜಲಿಂಗು, ಬೋಧಕರು ಭಾಗವಹಿಸಿದ್ದರು.
04 ಫೋಟೋ ಎಂಡಿವೈ ಕೆ.ಎಂ.ದೊಡ್ಡಿ 1: ಕೆ.ಎಂ.ದೊಡ್ಡಿ ಭಾರತೀ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸಕ ಶಿವಲಿಂಗೇಗೌಡ, ಡಾ.ಎಂ.ಎಸ್.ಮಹದೇವಸ್ವಾಮಿ, ಅರ್ಚನಾ, ಬಿ.ಕೆ.ಕೃಷ್ಣ, ಡಾ.ಎಂ.ಪಿ.ತೇಜೇಶ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net