ನಾರ್ತ್‌ಬ್ಯಾಂಕ್‌ನಲ್ಲಿ ಕಾಳಮನ ಜಾತ್ರೆ ಅದ್ದೂರಿ

ಕೆ.ಆರ್.ಸಾಗರ ಸಮೀಪದ ನಾರ್ತ್‌ಬ್ಯಾಂಕ್‌ನಲ್ಲಿ ಕಾಳಮ್ಮ (ಕನ್ನಂಬಾಡಿ ಮಹಾಲಕ್ಷ್ಮಿ) ಜಾತ್ರೆ ಪ್ರಯುಕ್ತ ನಡೆದ ರಥೋತ್ಸವ.
ಕೆ.ಆರ್.ಸಾಗರ ಸಮೀಪದ ನಾರ್ತ್‌ಬ್ಯಾಂಕ್‌ನಲ್ಲಿ ಕಾಳಮ್ಮ (ಕನ್ನಂಬಾಡಿ ಮಹಾಲಕ್ಷ್ಮಿ) ಜಾತ್ರೆ ಪ್ರಯುಕ್ತ ನಡೆದ ರಥೋತ್ಸವ.
Published on
ಕೆ.ಆರ್. ಸಾಗರ : ಕೆ.ಆರ್.ಸಾಗರ ಸಮೀಪದ ನಾರ್ತ್‌ಬ್ಯಾಂಕ್ ಗ್ರಾಮದಲ್ಲಿ ಪ್ರಸಿದ್ಧ  ಶ್ರೀ ಕಾಳಮ್ಮ (ಕನ್ನಂಬಾಡಿ ಮಹಾಲಕ್ಷ್ಮೀ) ಜಾತ್ರೆ ಪ್ರಯುಕ್ತ ಶನಿವಾರ ರಥೋತ್ಸವ ಅದ್ದೂರಿಯಾಗಿ ನಡೆಯಿತು.  
ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮೊದಲಿಗೆ ಉತ್ಸವ ಮೂರ್ತಿಯನ್ನು ನಾದಸ್ವರದ ಸಮೇತ ಪ್ರದಕ್ಷಿಣೆ ಮಾಡಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವಸ್ಥಾನದ ಸುತ್ತು ಪ್ರದಕ್ಷಿಣೆ ಮಾಡಲಾಯಿತು. ಈ ವೇಳೆ ದೇವರಿಗೆ ಹಣ್ಣುದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು. ಒಂದು ವಾರದಿಂದ ದೇವರಿಗೆ ಪೂಜಾ ಕೈಂಕರ್ಯಗಳು ವಿಶೇಷವಾಗಿ ನಡೆಯುತ್ತಿದ್ದು, ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ಡಾ.ಶಶಿಶೇಖರ್ ದೀಕ್ಷಿತ್ ಹೇಳಿದರು.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಭಾಗವಹಿಸಿ ರಥೋತ್ಸವದ ಜತೆ ಸಾಗಿದರು. ನಂತರ ದೇವಸ್ಥಾನಕ್ಕೆ  ಭೇಟಿ ನೀಡಿ ದೇವರ ದರ್ಶನ ಪಡೆದರು. ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕೂಡ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 
ಗ್ರಾಮದ ಹಲವುರು ಸೇರಿದಂತೆ ಯುವಕ ಸಂಘದವರು ಹಾಗೂ ಕೆಲವು ಭಕ್ತರು ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net