ಕೆ.ಕುಮಾರ್ ಅಧ್ಯಕ್ಷ, ಜೆ.ಗಿರೀಶ್ ಉಪಾಧ್ಯಕ್ಷ

ಪಾಂಡವಪುರ ತಾಲೂಕಿನ ಚಿಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಕೆ.ಕುಮಾರ್ ಹಾಗೂ ಉಪಾಧ್ಯಕ್ಷ ಜೆ.ಗಿರೀಶ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಕೆೆಂಪೇಗೌಡ, ಶಿವಣ್ಣ, ಎಸ್.ವೆಂಕಟೇಶ್(ಗೌಡಪ್ಪ), ನಾಗರಾಜು, ನೀಲಕಂಠೇಗೌಡ, ಎನ್.ದಿವ್ಯಾ, ಹೇಮಾ, ಡಿ.ಎಚ್.ಗೋಪಾಲ್ ಇತರರು ಇದ್ದರು.
ಪಾಂಡವಪುರ ತಾಲೂಕಿನ ಚಿಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಕೆ.ಕುಮಾರ್ ಹಾಗೂ ಉಪಾಧ್ಯಕ್ಷ ಜೆ.ಗಿರೀಶ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಕೆೆಂಪೇಗೌಡ, ಶಿವಣ್ಣ, ಎಸ್.ವೆಂಕಟೇಶ್(ಗೌಡಪ್ಪ), ನಾಗರಾಜು, ನೀಲಕಂಠೇಗೌಡ, ಎನ್.ದಿವ್ಯಾ, ಹೇಮಾ, ಡಿ.ಎಚ್.ಗೋಪಾಲ್ ಇತರರು ಇದ್ದರು.
Published on
ಪಾಂಡವಪುರ: ತಾಲೂಕಿನ ಚಿಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಕುಮಾರ್ ಹಾಗೂ ಉಪಾಧ್ಯಕ್ಷ ಜೆ.ಗಿರೀಶ್ ಆಯ್ಕೆಯಾದರು.
ಸಂಘದ 11 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ನಿರ್ದೇಶಕ ಆಯ್ಕೆಯಾಗುವ ಮೂಲಕ ಸಂಘದ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಗಿರೀಶ್ ನಾಮಪತ್ರ ಸಲ್ಲಿಸಿದರು. ಇಬ್ಬರನ್ನು ಹೊರತುಪಡಿಸಿ ಉಳಿದ ನಿರ್ದೇಶಕರು ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಕೆ.ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಜೆ.ಗಿರೀಶ್ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಚುನಾವಣಾಧಿಕಾರಿ ಘೋಷಿಸಿದರು.
ಅಧ್ಯಕ್ಷ ಕೆ.ಕುಮಾರ್ ಹಾಗೂ ಉಪಾಧ್ಯಕ್ಷ ಜೆ.ಗಿರೀಶ್ ಅವರನ್ನು ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಅಭಿನಂದಿಸಿ, ಮಾತನಾಡಿ, ಚಿಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದಾರೆ. ತಾಲೂಕಿನ ಬಹುತೇಕ ಸಹಕಾರ ಸಂಘಗಳಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ನಡೆಸುತ್ತಿದ್ದು, ಮುಂದಿನ ದಿನಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿಕ್ಸೂಚಿಯಾಗಲಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಿರ್ದೇಶಕರಾದ ಕೆಂಪೇಗೌಡ, ಶಿವಣ್ಣ, ಎಸ್.ವೆಂಕಟೇಶ್(ಗೌಡಪ್ಪ), ನಾಗರಾಜು, ನೀಲಕಂಠೇಗೌಡ, ಎನ್.ದಿವ್ಯಾ, ಹೇಮಾ, ಡಿ.ಎಚ್.ಗೋಪಾಲ್, ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಕೋಡಾಲ ರಾಧಾಕೃಷ್ಣ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಸುಂದ್ರಣ್ಣ, ಟಿ.ಕೆ.ರಘು, ಬೋರೇಗೌಡ, ಬಲರಾಮು, ಗೋವಿಂದೇಗೌಡ, ಸುಭಾಷ್, ಕುಮಾರ್ ಚಿಟ್ಟನಹಳ್ಳಿ, ಜಗದೀಶ್, ಪುಟ್ಟರಾಜು, ಶಂಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net