ಜೆಡಿಎಸ್ ರಾಜ್ಯ ವಕ್ತಾರ ಹಡೇನಹಳ್ಳಿ ಉಮೇಶ್ ಮಾತನಾಡಿ, ಮಾಜಿ ಸಂಸದ, ಮಾಜಿ ಶಾಸಕರಾಗಿ ಹಿರಿಯ ರಾಜಕಾರಣಿಗಳ ಬಗ್ಗೆ ಅಸಂವಿಧಾನಿಕ ಪದಗಳನ್ನು ಬಳಸಿ ಸಂಭಾಷಣೆ ಮಾಡಿರುವುದು ನಮ್ಮ ಜಿಲ್ಲೆಗೆ ಮಾಡಿರುವ ಅಪಮಾನವಾಗಿದೆ. ಎಲ್.ಆರ್.ಶಿವರಾಮೇಗೌಡ ತಮ್ಮ ರಾಜಕೀಯದಲ್ಲಿ ಆಧಾರರಹಿತ ಆರೋಪಗಳಿಂದಲೇ ರಾಜಕೀಯ ವನವಾಸ ಮಾಡುತ್ತಿದ್ದರು ಅವರಿಗೆ ಬುದ್ಧಿ ಬಂದಿಲ್ಲ. ಮಾಜಿ ಶಾಸಕ ಸುರೇಶ್‌ಗೌಡ, ಸಚಿವ ಚಲುವರಾಯಸ್ವಾಮಿ ಅವರು ಎಕರೆಗೆ ಇಂತಿಷ್ಟು ಫಿಕ್ಸ್ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ. ಮಾಜಿ ಸಂಸದರಾಗಿ ಭೂಹಗರಣ ನಡೆಯುತ್ತಿದ್ದರೆ ನಿಮ್ಮ ಜವಾಬ್ದಾರಿ ಏನು. ನೀವು ಹೋರಾಟ ಮಾಡದೆ ಕೇವಲ ಮಾತನಾಡುವುದೇ ನಿಮ್ಮ ಕೆಲಸವೇ. ಪ್ರಚಾರದ ಗೀಳಿಗಾಗಿ ಆಧಾರರಹಿತವಾಗಿ ಮಾತನಾಡುವುದೇ ಅವರ ಕೆಲಸವಾಗಿದೆ. ಅವರಿಗೆ ಆತ್ಮಸಾಕ್ಷಿಯಿದ್ದರೆ ಬರಲಿ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಲು ನಾವು ಸಿದ್ಧರಿದ್ದೇವೆ. ಸತ್ಯ ಸತ್ಯಾತೆ ಜನರಿಗೆ ತಿಳಿಯಲಿ ಎಂದರು.