ಜನರಿಗೆ ಸ್ಪಂದಿಸುವ ಸಂಸ್ಥೆ ಜೈ ಕರ್ನಾಟಕ ಪರಿಷತ್

ಮದ್ದೂರು ನಗರದ ಪುರಾಣ ಪ್ರಸಿದ್ಧ ನರಸಿಂಹ ದೇವಸ್ಥಾನದ ಆವರಣದಲ್ಲಿ ನೂತನ ಸದಸ್ಯರನ್ನು ಜೈ ಕರ್ನಾಟಕ ಪರಿಷತ್ತು ಸಪರಿಷತ್ತಿಗೆ ಡಾ.ಎಸ್.ನಾರಾಯಣ್ ಸ್ವಾಗತಿಸಿದರು. ಎಂ.ಪುಟ್ಟಸ್ವಾಮಿ, ಕೆ.ಬಿ.ಕೆಂಪೇಗೌಡ, ಬಿ.ಡಿ.ಪುಟ್ಟಸ್ವಾಮಿ, ಕೆ.ಪುಟ್ಟೇಗೌಡ, ಜಿ.ಟಿ.ಕೃಷ್ಣಪ್ಪ ಇದ್ದರು.
ಮದ್ದೂರು ನಗರದ ಪುರಾಣ ಪ್ರಸಿದ್ಧ ನರಸಿಂಹ ದೇವಸ್ಥಾನದ ಆವರಣದಲ್ಲಿ ನೂತನ ಸದಸ್ಯರನ್ನು ಜೈ ಕರ್ನಾಟಕ ಪರಿಷತ್ತು ಸಪರಿಷತ್ತಿಗೆ ಡಾ.ಎಸ್.ನಾರಾಯಣ್ ಸ್ವಾಗತಿಸಿದರು. ಎಂ.ಪುಟ್ಟಸ್ವಾಮಿ, ಕೆ.ಬಿ.ಕೆಂಪೇಗೌಡ, ಬಿ.ಡಿ.ಪುಟ್ಟಸ್ವಾಮಿ, ಕೆ.ಪುಟ್ಟೇಗೌಡ, ಜಿ.ಟಿ.ಕೃಷ್ಣಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಡಾ.ಎಸ್.ನಾರಾಯಣ್ ಅಭಿಮತ
ಮದ್ದೂರು : ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳು ಹಾಗೂ ಸರ್ಕಾರದ ಸವಲತ್ತುಗಳನ್ನು ಜನರಿಗೆ ದೊರಕಿಸಿಕೊಡಲು ಜೈ ಕರ್ನಾಟಕ ಪರಿಷತ್ತು ಸಂಘಟನೆಯಲ್ಲಿ ಸದಾ ಮುಂದಿರುತ್ತದೆ ಎಂದು ಅಧ್ಯಕ್ಷ ಡಾ.ಎಸ್.ನಾರಾಯಣ್ ತಿಳಿಸಿದರು.
ನಗರದ ಪುರಾಣ ಪ್ರಸಿದ್ಧ ಶ್ರೀ ನರಸಿಂಹ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನೂತನ ಸದಸ್ಯರನ್ನು ಪರಿಷತ್ತಿಗೆ ಸ್ವಾಗತಿಸಿ ಮಾತನಾಡಿದರು. ಜನರಿಗೆ ಸ್ಪಂದಿಸುವ ಸಂಸ್ಥೆ ಎಂದರೆ ಅದು ಜೈ ಕರ್ನಾಟಕ ಪರಿಷತ್ತು. ಸಂಘಟನೆಯು ಸ್ಥಳೀಯರ ನೋವು ನಲಿವುಗಳಿಗೆ ಸದಾ ಸ್ಪಂದನೆ ನೀಡುತ್ತದೆ. ಜತೆಗೆ ಒಳ್ಳೆಯ ನಾಯಕ, ನಾಯಕಿಯರನ್ನು ಸೃಷ್ಟಿ ಮಾಡುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಕೆಲಸಗಳು, ಕನ್ನಡ ಗ್ರಂಥಾಲಯಗಳು. ಕನ್ನಡ ಭವನ ನಿರ್ಮಾಣ ಆಗಬೇಕಿದೆ. ಅಂಗಡಿ, ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳ ಕನ್ನಡ ನಾಮಫಲಕಗಳು ಶೇ.60ರಷ್ಟು ಇರುವುದಿಲ್ಲ. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು, ಮಳಿಗೆಗಳು ಶೇ.60ರಷ್ಟು ಕನ್ನಡ ನಾಮಫಲಕ ಹಾಕಬೇಕಿದೆ. ಮುಂದಿನ ದಿನಗಳಲ್ಲಿ ಕನ್ನಡ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಕೆಲಸವನ್ನು ಜೈ ಕರ್ನಾಟಕ ಪರಿಷತ್ತು ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಪರಿಷತ್ತು ಸಂಘಟನೆಯನ್ನು ಬೆಂಬಲಿಸಿ ಹಲವಾರುಹೊಸ ಸದಸ್ಯರು ಸದಸ್ಯತ್ವ ಪಡೆದುಕೊಂಡು ಸೇರ್ಪಡೆಯಾದರು. ವೈರಮುಡಿ, ಜಿ.ಎನ್.ಪುಟ್ಟಲಿಂಗಯ್ಯ, ಜಿ.ಎಂ.ಹೊನ್ನಪ್ಪ, ರುದ್ರಯ್ಯ, ಪಿ.ಕೃಷ್ಷಮೂರ್ತಿ, ನಾಗಣ್ಣ, ಜಿ.ಕುಮಾರ್, ಮಲ್ಲೇಶ್, ನಾರಾಯಣಗೌಡ, ಜಿ.ಎಸ್.ನಿಂಗರಾಜ್, ಜಿ.ಪಿ.ಸಿದ್ದಾಚಾರ್, ಆರ್.ಆನಂದ್, ಲಕ್ಷ್ಮಣಚಾರ್, ಪ್ರಕಾಶ್, ಎಂ.ಸಿ.ಜಯರಾಮ್, ಪ್ರತಾಪ್, ಎಂ.ಪಿ.ನಾಗರಾಜಯ್ಯ, ಕೆ.ಎಂ.ರಾಮಕೃಷ್ಣ, ಹೆಚ್.ಡಿ.ವೆಂಕಟೇಶ್ ಮೂರ್ತಿ, ಪ್ರದೀಪ್, ಚಿಕ್ಕಣ್ಣ, ಶಿವಲಿಂಗೌಡ, ನೂತನವಾಗಿ ಸೇರ್ಪಡೆಯಾದರು.
ಪರಿಷತ್ತಿನ ಪದಾಧಿಕಾರಿಗಳಾದ ಎಂ.ಪುಟ್ಟಸ್ವಾಮಿ, ಕೆ.ಬಿ.ಕೆಂಪೇಗೌಡ, ಬಿ.ಡಿ.ಪುಟ್ಟಸ್ವಾಮಿ, ಕೆ.ಪುಟ್ಟೇಗೌಡ, ಜಿ.ಟಿ.ಕೃಷ್ಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net