ಶೈವ ತತ್ವ ಜನಸಾಮಾನ್ಯರಿಗೆ ತಲುಪಿಸಿದವರು ರೇಣುಕಾಚಾರ್ಯರು

 ಮಳವಳ್ಳಿ ವಿಶ್ವಗುರು ಕೋ-ಆಪರೇಟಿವ್ ಸೊಸೈಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾಗವೇಣಿ ಮತ್ತು ಬಿ.ಜೆ.ಶಾಮತಕುಮಾರಿ ಅವರನ್ನು ಅಭಿನಂದಿಸಲಾಯಿತು. ಶಿವಾನಂದ ಶಿವಾಚಾರ್ಷ ಸ್ವಾಮೀಜಿ, ಕೆ.ಎಸ್.ಗುರುಪ್ರಸಾದ್ ರಂಗಸ್ವಾಮಿ, ಸಿದ್ದಲಿಂಗಸ್ವಾಮಿ, ಕೃಷ್ಣಶೆಟ್ಟಿ, ದಯಾಶಂಕರ್, ಮಹದೇವು, ವಿಶ್ವಾಸ್, ಮಹೇಶ್‌ಕುಮಾರ್, ರಾಜು, ಮಲ್ಲಿಕಾರ್ಜುನಸ್ವಾಮಿ ಇದ್ದರು.

Published on
ಮಳವಳ್ಳಿ: ರೇಣುಕಾಚಾರ್ಯರು ’ಸಿದ್ಧಾಂತ ಶಿಖಾಮಣಿ’ ಎಂಬ ಗ್ರಂಥ ರಚಿಸುವ ಮೂಲಕ ಶೈವ ತತ್ವವನ್ನು ಜನಸಾಮಾನ್ಯರಿಗೆ ತಲುಪಿಸಿದರು ಎಂದು ಪೂರಿಗಾಲಿ ಒಡೆಯರ ಮಠದ ಶಿವಾನಂದ ಶಿವಾಚಾರ್ಷ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ವಿಶ್ವಗುರು ಕೋ-ಆಪರೇಟಿವ್ ಸೊಸೈಟಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆಶಿರ್ವಚನ ನುಡಿಗಳನಾಡಿದ ಅವರು, ಇಷ್ಟಲಿಂಗ ಧಾರಣೆ ಮೂಲಕ ವೈಯಕ್ತಿಕ ಭಕ್ತಿಯನ್ನು ಒತ್ತಿ ಹೇಳುವುದರ ಜತೆಗೆ ಸಮಾನತೆ ಮತ್ತು ಸಹಬಾಳ್ವೆಯ ತತ್ವವನ್ನು ಬೋಧಿಸಿದರು ರೇಣುಕಾಚಾರ್ಯರು. ಲಿಂಗಾಯತ ಮತ್ತು ವೀರಶೈವ ಸಮುದಾಯಗಳು ಸಮಾನತೆ, ಶೈವ ಭಕ್ತಿ ಮತ್ತು ಸಾಮರಸ್ಯವನ್ನು ಸ್ಮರಿಸುತ್ತಾರೆ ಎಂದು ತಿಳಿಸಿದರು.
ಪ್ರಸ್ತುತ ಮಹಿಳೆಯರು ಪುರಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಸಾಧನೆ ಮಾಡಿದ್ದಾರೆ. ಹಾಗಾಗಿ ಹೆಣ್ಣು-ಗಂಡೆಂಬ ಭೇದ ಮಾಡುತ್ತಿದ್ದ ಕಾಲ ಮರೆಯಾಗುತ್ತಿದೆ ಎಂದು ತಿಳಿಸಿದರು.
ವಿಶ್ವಗುರು ಸೊಸೈಟಿ ಸಂಸ್ಥಾಪ ನಿರ್ದೇಶಕ ಕೆ.ಎಸ್.ಗುರುಪ್ರಸಾದ್ ಅವರಿಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳಾ ದಿನಾಚಣೆ ಪ್ರಯುಕ್ತ ಶಿಕ್ಷಕಿ ನಾಗವೇಣಿ ರುದ್ರಸ್ವಾಮಿ ಮತ್ತು ಬಿ.ಜೆ.ಶಾಂತಕುಮಾರಿ ಅವರನ್ನು ಗೌರವಿಸಲಾಯಿತು.
ಸೊಸೈಟಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ನಿರ್ದೇಶಕರಾದ ಕೃಷ್ಣಶೆಟ್ಟಿ, ಕೆ.ಎಸ್.ಗುರುಪ್ರಸಾದ್, ದಯಾಶಂಕರ್, ಮಹದೇವು, ವಿಶ್ವಾಸ್, ಮಹೇಶ್‌ಕುಮಾರ್, ರಾಜು, ಮಲ್ಲಿಕಾರ್ಜುನಸ್ವಾಮಿ, ಚಂದ್ರಮ್ಮ, ರೂಪಾ, ಮಹೇಶ್, ಮುಖಂಡರಾದ ಕುಂದೂರು ಪ್ರಕಾಶ್, ಮೂರ್ತಿ, ಶಿವಸ್ವಾಮಿ, ಮಹೇಶ್, ಪರಶಿವಮೂರ್ತಿ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net