ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಬೇಸಿಗೆ ಬಂತೆಂದರೆ ಬಹುತೇಕ ಮಕ್ಕಳ ಸೈನ್ಯ ಕೆರೆ, ಕಟ್ಟೆ, ನಾಲೆ, ಬಾವಿ ಬಳಿ ಜಮಾಯಿಸಿ ಸಾಕಷ್ಟು ಪ್ರಾಣಹಾನಿ ಆಗುವ ಸಂಭವ ಇದೆ. ಜಿ.ಪಂ. ಸಿಇಒ ಕೆ.ಆರ್.ನಂದಿನಿ ವಿಶೇಷ ಆಸ್ಥೆಯಿಂದ ಜಿಲ್ಲಾದ್ಯಂತ ಜರುಗುತ್ತಿರುವ ಈ ಬೇಸಿಗೆ ಶಿಬಿರದಿಂದ ಇಂತಹ ಅಹಿತಕರ ಘಟನೆಗೆ ಕಡಿವಾಣ ಬೀಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಇಂತಹ ಶಿಬಿರದಿಂದ ಸರ್ಕಾರಿ ಶಾಲೆ ದಾಖಲೆ ಹೆಚ್ಚುವುದಲ್ಲದೆ ಮನೋವಿಕಸನ, ಸಂಭ್ರಮ ಎಲ್ಲವೂ ವೃದ್ಧಿಸಲಿದೆ ಎಂದು ತಿಳಿಸಿರುವುದು ಸರ್ಕಾರಿ ಶಾಲೆ ಉಳಿವಿಗೆ ಸಹಕಾರಿಯಾಗಲಿದೆ ಎಂದರು.