ಲೋಕಾ ಬಲೆಗೆ ಬಿದ್ದ ರಾಜಸ್ವ ನಿರೀಕ್ಷಕ

ಮಳವಳ್ಳಿ ತಾಲೂಕು ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಶುಕ್ರವಾರ ರಾಜಸ್ವ ನಿರೀಕ್ಷ ಮಧುಸೂದನ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ವಶಕ್ಕೆ ಪಡೆದು ಮಹಜರು ನಡೆಸಿದರು.  ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್, ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಮತ್ತು ಸಿಬ್ಬಂದಿ ಇದ್ದರು.

Published on
ಮಳವಳ್ಳಿ: ತಾಲೂಕು ಕಚೇರಿಯಲ್ಲಿ ಜಮೀನಿನ ದಾಖಲೆ ಮಾಡಿಕೊಡಲು ರೈತರೊಬ್ಬರಿಂದ ಶುಕ್ರವಾರ ಲಂಚ ಪಡೆಯುತ್ತಿದ್ದ ರಾಜಸ್ವ ನಿರೀಕ್ಷಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹಲಗೂರು ವೃತ್ತದ ರಾಜಸ್ವ ನಿರೀಕ್ಷಕ(ಆರ್‌ಐ) ಮಧಸೂದನ್ ಲೋಕಾ ಬಲೆಗೆ ಸಿಲುಕಿದ ಅಧಿಕಾರಿ.
ತಾಲೂಕಿನ ಡಿ.ಕೆ.ಹಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರು ತಾಯಿ ಕೆಂಪಮ್ಮ ಹೆಸರಿನಲ್ಲಿದ್ದ 5 ಎಕರೆ ಜಮೀನಿನ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿ, ಹಲವು ಬಾರಿ ಆರ್‌ಐ ಬಳಿ ಅಲೆದರೂ ದಾಖಲೆ ಸರಿಪಡಿಸಲು ಹೆಚ್ಚು ಖರ್ಚಾಗುತ್ತದೆ. ಅದನ್ನು ಕೊಡುವುದಾದರೆ ಮಾಡಿಸಿಕೊಡುವುದಾಗಿ ರೈತನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಎಕರೆಗೆ ಕನಿಷ್ಠ ಎರಡು ಲಕ್ಷ ರೂ. ಕೊಡುವಂತೆ ಆರ್‌ಐ ತಿಳಿಸಿದ್ದರು. ಈ ಬಗ್ಗೆ ರೈತ ಲೋಕಾಯುಕ್ತ ಪೊಲೀಸರಿಗೆ ವಿವರವಾಗಿ ದೂರು ನೀಡಿದ್ದರು. ಪೂರ್ವ ಸಿದ್ಧತೆಯಂತೆ ತಾಲೂಕು ಕಚೇರಿಯಲ್ಲಿ ಆರ್‌ಐ ಮಧುಸೂದನ್‌ಗೆ ಮುಂಗಡ 10 ಸಾವಿರ ರೂ. ಕೊಡುವ ವೇಳೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಎಸ್. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್ ರವಿಕುಮಾರ್, ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net