ಚಿಕ್ಕಮಂಡ್ಯ ಸಮೀಪ ಹೆಲಿಪ್ಯಾಡ್ ರೆಡಿ: ಸ್ಥಳ ಪರಿಶೀಲಿಸಿದ ಶಾಸಕ ರವಿಕುಮಾರ್ ಗಣಿಗ

ಬೂದನೂರು ಉತ್ಸವದ ಅಂಗವಾಗಿ ಚಿಕ್ಕಮಂಡ್ಯ ಸಮೀಪ ನಡೆಯಲಿರುವ ಹೆಲಿಟೂರಿಸಂಗೆ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ಪರಿಶೀಲನೆ ನಡೆಸಿದರು.
ಬೂದನೂರು ಉತ್ಸವದ ಅಂಗವಾಗಿ ಚಿಕ್ಕಮಂಡ್ಯ ಸಮೀಪ ನಡೆಯಲಿರುವ ಹೆಲಿಟೂರಿಸಂಗೆ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಫೆ.21 ಮತ್ತು 22ರಂದು ಎರಡನೇ ವರ್ಷದ ಉತ್ಸವ
  • ಏಳು ನಿಮಿಷ ಆಕಾಶದಲ್ಲಿ ಹಾರಾಡಲು 3,800 ರೂ ಟಿಕೆಟ್
ಮಂಡ್ಯ: ಬೂದನೂರು ಉತ್ಸವದ ಅಂಗವಾಗಿ ಫೆ.20ರಿಂದ ಮೂರು ದಿನ ನಡೆಯಲಿರುವ ಹೆಲಿಟೂರಿಸಂಗೆ ಚಿಕ್ಕಮಂಡ್ಯ ಗ್ರಾಮದ ಸಮೀಪ ಹೆಲಿಪ್ಯಾಡ್ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಬೂದನೂರು ಗ್ರಾಮದಲ್ಲಿ ಫೆ.21 ಮತ್ತು 22ರಂದು ಎರಡನೇ ವರ್ಷದ ಉತ್ಸವ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಹೆಲಿಟೂರಿಸಂ ಪ್ರಮುಖ ಆಕರ್ಷಣೆಯಾಗಿದೆ. ಅದರಂತೆ ಗ್ರಾಮದಲ್ಲಿ ಉತ್ಸವದ ಪರಿಶೀಲನೆ ನಡೆಸಿದ ಶಾಸಕರು, ನಂತರ ಹೆಲಿಪ್ಯಾಡ್ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಅಂತೆಯೇ ಅಧಿಕಾರಿಗಳಿಂದ ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡರು.
ಏಳು ನಿಮಿಷಕ್ಕೆ 3,800 ರೂ ನಿಗದಿ: ಹೆಲಿಟೂರಿಸಂ ಜಾಯ್‌ರೈಡ್ಸ್ ಚಟುವಟಿಕೆ ಮಂಡ್ಯ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕಮಂಡ್ಯ ಸಮೀಪ ನಡೆಯಲಿದೆ. ಮೂರು ದಿನವೂ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ಅವಕಾಶ ನೀಡಲಾಗಿದೆ. ಪ್ರತಿ ವ್ಯಕ್ತಿ ಏಳು ನಿಮಿಷ ಆಕಾಶದಲ್ಲಿ ಹಾರಾಡಲು 3,800 ರೂ ಟಿಕೆಟ್ ಪಡೆಯಬೇಕು.ಕಾಗಿದೆ. ಏಳು ನಿಮಿಷಗಳ ಕಾಲ ಹೆಲಿಕ್ಯಾಪ್ಟರ್‌ನಲ್ಲಿ ಹಾರಾಡುವಂತಹ ಅವಕಾಶ ಕಲ್ಪಿಸಲಾಗಿದೆ.
ಹೆಲಿಕ್ಯಾಪ್ಟರ್ ಜಾಯ್‌ರೈಡ್‌ಗಾಗಿ ಆನ್‌ಲೈನ್ ಹಾಗೂ ಆ್ಲೈನ್ ಎರಡು ವಿಧಾನಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಲಿಕ್ಯಾಪ್ಟರ್ ಜಾಯ್ ರೈಡ್ ನಡೆಯುವ ಸ್ಥಳದಲ್ಲಿ ಸ್ಥಾಪಿಸಲಾಗುವ ಟಿಕೆಟ್ ಕೌಂಟರ್‌ನಲ್ಲೂ ಪಡೆಯಬಹುದು. ಇನ್ನು ಹೆಲಿಕ್ಟಾಪ್ಟರ್‌ನೊಳಗೆ ಯಾವುದೇ ವಿಧದ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನು ಕೊಂಡೊಯ್ಯಲು ಅವಕಾಶವಿರುವುದಿಲ್ಲ. 5 ವರ್ಷದೊಳಗಿನ ಮಕ್ಕಳಿಗೆ ಹೆಲಿಕ್ಯಾಪ್ಟರ್ ಜಾಯ್ ರೈಡ್‌ಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆರಿ ಟೂರಿಸಂಗೆ ಸುರಕ್ಷತಾ ಮಾನದಂಡ, ಅಗತ್ಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಹನಗಳ ನಿಲುಗಡೆ, ಸಂಚಾರ ದಟ್ಟಣೆ ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳ ಸಿದ್ಧತೆ ಹಾಗೂ ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಉತ್ಸವ ಕಳೆಗಟ್ಟಲು ವಿವಿಧ ಚಟುವಟಿಕೆ
ಬೂದನೂರು ಉತ್ಸವದ ಅಂಗವಾಗಿ ವಿವಿಧ ಚಟುವಟಿಕೆ ಆಯೋಜಿಸಲಾಗಿದೆ. 17ರಂದು ಬೆಳಗ್ಗೆ 11 ಗಂಟೆಗೆ ಹೊಸಬೂದನೂರು ದೇವಸ್ಥಾನದ ಆವರಣದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, 18 ಮತ್ತು 19ರಂದು ಕಸಬಾ ಹೋಬಳಿಯ 38 ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆ, ಅಂದು ಬೆಳಗ್ಗೆ 9 ಗಂಟೆಗೆ ಕೊಮ್ಮೇರಹಳ್ಳಿಯ ವಿಶ್ವಮಾನವ ಶಾಲಾ ಮೈದಾನದಲ್ಲಿ ಕಬ್ಬಡಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಸೈಕಲ್ ರೇಸ್, ಓಟದ ಸ್ಪರ್ಧೆ, ಲೆಮನ್ ಸ್ಪೂನ್ ಆಟ ನಡೆಯಲಿವೆ.
20ರಂದು ಬೆಳಗ್ಗೆ 10ಕ್ಕೆ ಚಿಕ್ಕಮಂಡ್ಯ, ಗೋಪಾಲಪುರ ಮದ್ಯದ ಮೈದಾನದಲ್ಲಿ ಹೆಲಿಕ್ಯಾಪ್ಟರ್ ರೈಡ್ ಉದ್ಘಾಟನೆ, ಮಧ್ಯಾಹ್ನ 3ಕ್ಕೆ ಹೊಸಬೂದನೂರು ದೇವಸ್ಥಾನದ ಆವರಣದಲ್ಲಿ ಆಹಾರ ಮೇಳಕ್ಕೆ ಚಾಲನೆ, 4ಗಂಟೆಗೆ ಹಳೇಬೂದನೂರು ಗ್ರಾಮದಿಂದ ಬೃಹತ್ ಮೆರವಣಿಗೆ, ಹೊಸಬೂದನೂರು ದೇವಸ್ಥಾನ ಆವರಣದ ಬೃಹತ್ ಮೈದಾನದಲ್ಲಿ ಗುರುಕಿರಣ್ ನೈಟ್, ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಹಲವಾರು ಚಲನಚಿತ್ರ ನಟ ನಟಿಯರು ಭಾಗವಹಿಸುವರು. ೆ. 21ರಂದು ರಾತ್ರಿ ಹೊಸಬೂದನೂರಿನ ಬೃಹತ್ ಮೈದಾನದ ಆವರಣದಲ್ಲಿ ರಾಜೇಶ್ ಕೃಷ್ಣನ್ ಸಂಭ್ರಮ ಹಾಗೂ ಆಲ್ ಓಕೆ ತಂಡದಿಂದ ಮ್ಯೂಸಿಕ್ ನಡೆಯಲಿದೆ.

ಎರಡನೇ ವರ್ಷದ ಉತ್ಸವ
ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಬೂದನೂರು ಉತ್ಸವಕ್ಕೆ 2024ರಲ್ಲಿ ಚಾಲನೆ ನೀಡಲಾಗಿತ್ತು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2025ರಲ್ಲಿ ಆಯೋಜಿಸಿದ ಹಿನ್ನೆಲೆಯಲ್ಲಿ ಉತ್ಸವ ನಡೆದಿರಲಿಲ್ಲ. ಈ ಬಾರಿ ವಿಜೃಂಭಣೆಯ ಉತ್ಸವಕ್ಕೆ ಬೂದನೂರು ಸಜ್ಜಾಗಿದೆ. ಮಾತ್ರವಲ್ಲದೆ ಈ ವರ್ಷ ಹೆಲಿಟೂರಿಸಂ ಹಾಗೂ ರಂಗೋಲಿ ಸ್ಪರ್ಧೆ ಮೆರಗು ನೀಡಲಿದೆ.
ಸಾಮಾನ್ಯವಾಗಿ ಅನಂತಪದ್ಮನಾಭ ವಿಗ್ರಹ ಮಲಗಿರುವ ಭಂಗಿಯಲ್ಲಿರುವ ದೇವಾಲಯಗಳು ಇವೆ. ಆದರೆ ನಿಂತಿರುವ ಭಂಗಿಯಲ್ಲಿರುವುದು ಬೂದನೂರು ಗ್ರಾಮದಲ್ಲಿ ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಇದೊಂದು ಐತಿಹಾಸಿಕ ತಾಣ ಮಾಡಬೇಕೆನ್ನುವ ಉದ್ದೇಶದಿಂದ ಶಾಸಕ ರವಿಕುಮಾರ್ ಗಣಿಗ ಬೂದನೂರು ಉತ್ಸವ ಆರಂಭಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net