ಬಿಜಿ ನಗರ ರೈಲ್ವೆ ಸ್ಟೇಷನ್ ಪರಿಶೀಲನೆ

ದೆಹಲಿ ಕಾರು ಸ್ಪೋಟದ ಘಟನೆ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕಿನ ಬಿಜಿ ನಗರ ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಡೆ ತಂಡದಿಂದ ಮುಂಜಾಗ್ರತ ಕ್ರಮವಾಗಿ ತಪಾಸಣೆ ನಡೆಸಲಾಯಿತು.
ದೆಹಲಿ ಕಾರು ಸ್ಪೋಟದ ಘಟನೆ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕಿನ ಬಿಜಿ ನಗರ ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಡೆ ತಂಡದಿಂದ ಮುಂಜಾಗ್ರತ ಕ್ರಮವಾಗಿ ತಪಾಸಣೆ ನಡೆಸಲಾಯಿತು.
Published on
ನಾಗಮಂಗಲ: ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕಿನ ಬಿಜಿ ನಗರ ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಡೆ ತಂಡದಿಂದ ಮಂಗಳವಾರ ಪರಿಶೀಲನೆ ನಡೆಯಿತು.
ತಾಲೂಕಿನ ಬಿಜಿ ನಗರದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕೀಯ ತಂಡ ಹಾಗೂ ಶ್ವಾನ ದಳ ಸೇರಿದಂತೆ ವಿದ್ವಂಸಕ ಕೃತ್ಯ ತಡೆ ತಂಡದಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ನಿಲ್ದಾಣವನ್ನು ಪರಿಶೀಲಿಸಲಾಯಿತು. ಈ ಸಂದರ್ಭ ಬೆಳ್ಳೂರು ಪೊಲೀಸರು ಜತೆಯಲ್ಲಿದ್ದು, ಪ್ರಮುಖ ಜನಸಂದಣಿಯ ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು. ರೈಲ್ವೆ ನಿಲ್ದಾಣ, ನಿಲ್ದಾಣದ ಕೆಲ ದೂರದವರೆಗಿರುವ ರೈಲ್ವೆ ಹಳಿಗಳು ಹಾಗೂ ರೈಲ್ವೆ ನಿಲ್ದಾಣದ ಸುತ್ತಲಿನ ಪ್ರದೇಶವನ್ನು ಪರಿಶೀಲಿಸಲಾಯಿತು. ಈ ಸಂದರ್ಭ ಯಾವುದೇ ಅನುಮಾನಸ್ಪದವಾದ ವಸ್ತುಗಳು ಹಾಗೂ ವ್ಯಕ್ತಿಗಳು ಕಂಡುಬಂದಿಲ್ಲ.
ಅನುಮಾನಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net