ಭಾರತೀಯರು ಸದಾ ಕಾಲಕ್ಕೂ ಸ್ಮರಿಸಬೇಕು

 ಶ್ರೀರಂಗಪಟ್ಟಣದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮೂರನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಡಿ.ಜ್ಯೋತ್ಸ್ನಾ ಪುಷ್ಪನಮನ ಅರ್ಪಿಸಿದರು. ಎಂ.ಈ.ಮೋಹನ್ ಗೌಡ, ಎಂ.ಹರೀಶ್‌ಕುಮಾರ್, ಎನ್.ಮರೀಗೌಡ ಇದ್ದರು.
ಶ್ರೀರಂಗಪಟ್ಟಣದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮೂರನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಡಿ.ಜ್ಯೋತ್ಸ್ನಾ ಪುಷ್ಪನಮನ ಅರ್ಪಿಸಿದರು. ಎಂ.ಈ.ಮೋಹನ್ ಗೌಡ, ಎಂ.ಹರೀಶ್‌ಕುಮಾರ್, ಎನ್.ಮರೀಗೌಡ ಇದ್ದರು.
Published on

ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಡಿ.ಜೋತ್ಸ್ನಾ ಹೇಳಿಕೆ

ಶ್ರೀರಂಗಪಟ್ಟಣ: ಸ್ಫೂರ್ತಿ, ನಿರ್ಭಯತೆ, ಆಶಾವಾದ ಸಂಕೇತದೊಂದಿಗೆ ದೇಶದ ಯುವ ಸಮೂಹದಲ್ಲಿ ವಿವೇಕ ಪ್ರಜ್ಞೆಯ ಜಾಗೃತಿ ಮೂಡಿಸಿದ ಮಹಾ ಬೆಳಕು ಸ್ವಾಮಿ ವಿವೇಕಾನಂದರನ್ನು ಭಾರತೀಯರು ಸದಾ ಕಾಲಕ್ಕೂ ಸ್ಮರಿಸಬೇಕು ಎಂದು ಮೂರನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಡಿ.ಜ್ಯೋತ್ಸ್ನಾ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಬಳಿಕ ಅವರು ಮಾತನಾಡಿದರು.
ಶಿಕ್ಷಣದ ಮೂಲಕ ವ್ಯಕ್ತಿ ಹಾಗೂ ಸಮಾಜದ ಏಳಿಗೆಗೆ ಕರೆ ನೀಡಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು. ಇಂತಹ ಮೇರು ವ್ಯಕ್ತಿತ್ವ ಭಾರತಕ್ಕೆ ಕೊಡುಗೆಯಾಗಿ ದೊರೆತಿದ್ದು, ಶ್ರೀ ಗುರು ರಾಮಕೃಷ್ಣ ಪರಮಹಂಸರ ನೀತಿ, ಆದರ್ಶಗಳಿಂದ ಎಂಬುದು ಸದಾ ಕಾಲಕ್ಕೂ ಗಮನಾರ್ಹ. ಈಗಲೂ ಸಹ ಭಾರತೀಯರಲ್ಲಿ ಶ್ರೀ ಗುರು ರಾಮಕೃಷ್ಣ, ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಶಾರದಾ ಮಾತೆಯ ಶಿಕ್ಷಣ ಸಂಸ್ಥೆಗಳು ಜ್ಞಾನದ ಅರಿವು ಜತೆಗೆ ಭರವಸೆಯ ಬದುಕು ಕಲ್ಪಿಸುವಲ್ಲಿ ಬದ್ಧತೆ ತೋರಿಸಿವೆ. ಶಿಕ್ಷಣ ಎಂದರೆ ಕೇವಲ ಪುಸ್ತಕಗಳ ಹೊರೆಯಲ್ಲ. ಪ್ರಜ್ಞಾವಂತಿಕೆ ವ್ಯಕ್ತಿತ್ವದ ಮನುಷ್ಯರನ್ನು ಸಮಾಜಕ್ಕೆ ಕೊಡುಗೆಯಾಗಬೇಕು ಎಂಬ ನೀತಿಯನ್ನು ಸರ್ವಕಾಲಕ್ಕೂ ಯುವಜನರು ಅರಿತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಘವೇಂದ್ರ ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು.
ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಈ.ಮೋಹನ್‌ಗೌಡ ಹಾಗೂ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಹರೀಶ್‌ಕುಮಾರ್ ಅವರು ಸ್ವಾಮಿ ವಿವೇಕಾನಂದರ ವಿವೇಕ ನೀತಿಗಳು ಹಾಗೂ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತಕ್ಕೆ ಕಲ್ಪಿಸಿದ ಮಹಾಗೌರವದ ಕುರಿತು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಮರೀಗೌಡ, ಉಪಾಧ್ಯಕ್ಷ ಶಿವರಾಮು, ಕಾರ್ಯದರ್ಶಿ ದಿನೇಶ್, ಜಂಟಿ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ವೈ.ಜಯಂತಿ, ವಕೀಲ ಎ.ಟಿ.ಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net