ವೈವಿಧ್ಯತೆಯಲ್ಲಿ ಏಕತೆ ಕಂಡ ರಾಷ್ಟ್ರ ಭಾರತ

ಕಿಕ್ಕೇರಿ ಕೆಪಿಎಸ್ ಶಿಕ್ಷಣ ಸಮೂಹದಲ್ಲಿ ಸೋಮವಾರ ಗಣರಾಜ್ಯೋತ್ಸವ ಜರುಗಿತು. ಎಂ.ಆರ್. ಸಹದೇವು, ಚಲುವನಾರಾಯಣಸ್ವಾಮಿ, ಕುಮಾರಸ್ವಾಮಿ, ದಿನೇಶ್‌ಬಾಬು, ಎಸ್.ಎಂ. ಬಸವರಾಜು, ಮಮತಾ, ಭಾರತಿ, ನಂಜುಂಡಯ್ಯ ಮತ್ತಿತರರಿದ್ದರು.
ಕಿಕ್ಕೇರಿ ಕೆಪಿಎಸ್ ಶಿಕ್ಷಣ ಸಮೂಹದಲ್ಲಿ ಸೋಮವಾರ ಗಣರಾಜ್ಯೋತ್ಸವ ಜರುಗಿತು. ಎಂ.ಆರ್. ಸಹದೇವು, ಚಲುವನಾರಾಯಣಸ್ವಾಮಿ, ಕುಮಾರಸ್ವಾಮಿ, ದಿನೇಶ್‌ಬಾಬು, ಎಸ್.ಎಂ. ಬಸವರಾಜು, ಮಮತಾ, ಭಾರತಿ, ನಂಜುಂಡಯ್ಯ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಶಾಲಾ ಶಿಕ್ಷಣ ಸಮೂಹದ ಪ್ರಾಂಶುಪಾಲ ಎಂ.ಆರ್. ಸಹದೇವು ಅಭಿಮತ
ಕಿಕ್ಕೇರಿ: ಸಂಸ್ಕೃತಿ, ನುಡಿ, ವೇಷಭೂಷಣದಲ್ಲಿ ವೈವಿಧ್ಯತೆ ಇದ್ದರೂ ಭಾವೈಕ್ಯತೆಯಲ್ಲಿ ನಮ್ಮದು ಏಕತೆಯ ರಾಷ್ಟ್ರ ಎಂದು ಕೆಪಿಎಸ್ ಶಾಲಾ ಶಿಕ್ಷಣ ಸಮೂಹದ ಪ್ರಾಂಶುಪಾಲ ಎಂ.ಆರ್. ಸಹದೇವು ತಿಳಿಸಿದರು.
ಇಲ್ಲಿನ ಕೆಪಿಎಸ್ ಶಾಲಾ ಶಿಕ್ಷಣ ಸಮೂಹ ಸೋಮವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಮ್ಮದು ಬಲುದೊಡ್ಡ ರಾಷ್ಟ್ರದಾಗಿದೆ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ವಿಶ್ವಮಾನ್ಯ ಗೌರವ, ಕೀರ್ತಿ ಇದೆ. ರಾಜಪ್ರಭುತ್ವ ಕಾಲದಲ್ಲಿ ಹರಿದು ಹೋಗಿದ್ದ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಿದ ಗಣತಂತ್ರ ದಿನ ಇದಾಗಿದೆ. ಡಾ. ಅಂಬೇಡ್ಕರ್ ಆಶಯದಂತೆ ಎಲ್ಲರಿಗೂ ಸಮಪಾಲು, ಸಮಬಾಳ್ವೆಯಿಂದ ಬದುಕುವುದನ್ನು ಕಲಿಯಬೇಕಿದೆ ಎಂದರು. 
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಜಾತ್ಯತೀತ ರಾಷ್ಟ್ರ ನಮ್ಮದು. ಆಚಾರ, ವಿಚಾರ, ಉಡುಗೆ, ತೊಡುಗೆ, ಭಾಷೆ, ಸಂಪ್ರದಾಯ, ಆಹಾರಶೈಲಿಯಿಂದ ಹಿಡಿದು ಎಲ್ಲದರಲ್ಲೂ ವೈವಿಧ್ಯತೆ ಇರುವ ದೇಶ ನಮ್ಮದು. ಆಚರಣೆಗಳು ಬೇರೆಯಾದರೂ ರಾಷ್ಟ್ರದ ವಿಷಯದಲ್ಲಿ ಏಕತೆ, ಐಕ್ಯತೆ ಎಲ್ಲವೂ ಇದೆ. ನಮ್ಮಲ್ಲಿನ ಒಗ್ಗಟ್ಟು ದೇಶದ ಸುರಕ್ಷತೆ ನಾಂದಿಯಾಗಲಿದೆ. ನಮ್ಮಲ್ಲಿನ ಕೀಳರಿಮೆಗಳು ದೇಶದ ಅಭದ್ರತೆ ಕಾರಣವಾಗಲಿದೆ. ಇದನ್ನರಿತು ಸರ್ವರೂ ಸಮಾನತೆಯಿಂದ ಬದುಕಬೇಕಿದೆ ಎಂದರು.  
ಹೋಬಳಿಯಾದ್ಯಂತ ಕಾರ್ಯಕ್ರಮದಲ್ಲಿ ಸಿಹಿ ಹಂಚಿ, ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ವಿವಿಧ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸ್ಮರಿಸಲಾಯಿತು. ಎಸ್‌ಡಿಎಂಸಿ ಸದಸ್ಯ ದಿನೇಶ್‌ಬಾಬು, ಮುಖ್ಯಶಿಕ್ಷಕಿ ಮಮತಾ, ಭಾರತಿ, ನಂಜುಂಡಯ್ಯ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಎನ್‌ಸಿಸಿ ಘಟಕಾಧಿಕಾರಿ ಎಸ್.ಎಂ. ಬಸವರಾಜು, ರವೀಂದ್ರ, ಮಂಜುನಾಥ್, ನಾಗೇಶ್ ಮತ್ತಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net