ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು ಮಾತನಾಡಿ, ಮಿತಿಮೀರಿದ ರಾಸಾಯನಿಕ ಬಳಕೆಯಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಡಲಿದ್ದು, ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳು ಜನರನ್ನು ಕಾಡಲಿವೆ. ರೈತರು ಸಂಘದ ಮೂಲಕ ಸಾವಯವ ಕೃಷಿಗೆ ಮರಳುತ್ತಿರುವುದು ಸಂತಸದ ವಿಚಾರ. ಸಾವಯವ ಕೃಷಿ ಮಾಡುವ ರೈತರು ತಮ್ಮ ಜಮೀನಿನಲ್ಲಿ ಒಂದು ಗುಂಡಿ ನಿರ್ಮಿಸಿ ಅದಕ್ಕೆ ಕೊಟ್ಟಿಗೆ ಗೊಬ್ಬರ, ಪ್ರಾಣಿ ತ್ಯಾಜ್ಯ ಮತ್ತು ಪಕ್ಷಿ ತ್ಯಾಜ್ಯಗಳನ್ನು ಹಾಕಿ, ಇಲಾಖೆಯಿಂದ ನೀಡುವ ಸೂಕ್ಷ್ಮಾಣು ಜೀವಿಗಳನ್ನು ಮಿಶ್ರಣ ಮಾಡಬೇಕು. ಎರಡು ದಿನಕ್ಕೊಮ್ಮೆ ನಿರ್ದಿಷ್ಟ ಮಟ್ಟದ ನೀರು ಹಾಕಿದರೆ ಉತ್ಕೃಷ್ಟ ಗೊಬ್ಬರ ಸಿಗಲಿದೆ. ಇದನ್ನು ಬಳಸಿ ಬೆಳೆಗಳನ್ನು ಬೆಳೆದರೆ ಗಿಡಗಳು ದಷ್ಟ ಪುಷ್ಟವಾಗಿ ಬೆಳೆದು ಉತ್ತಮ ಇಳುವರಿ ಸಿಗಲಿದೆ ಎಂದರು.