14 ರಂದು ಶ್ರೀ ಗಣಪತಿ ದೇಗುಲ ಉದ್ಘಾಟನೆ

ಶ್ರೀರಂಗಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಕಟ್ಟಡ ಹಾಗೂ ಶ್ರೀ ಗಣಪತಿ ದೇವಾಲಯದ ನಿರ್ಮಾಣ ಕಾಮಗಾರಿಯನ್ನು ಶ್ರೀ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಪರಿಶೀಲಿಸಿದರು. ಹಿರಿಯ ಮುಖಂಡರಾದ ಡಾ.ಎಂ.ಪುಟ್ಟೇಗೌಡ, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಒಕ್ಕಲಿಗ ಸಂಘಟನೆ ಮುಖಂಡ ಇಂದ್ರಕುಮಾರ್ ಇದ್ದರು.

Published on
ಶ್ರೀರಂಗಪಟ್ಟಣ: ಮಾ.14ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀರಂಗಪಟ್ಟಣದಲ್ಲಿನ ಶಿಕ್ಷಣ ಸಂಸ್ಥೆಯ 32 ಕೊಠಡಿಗಳ ನೂತನ ಕಟ್ಟಡ ಮತ್ತು ಶ್ರೀ ಗಣಪತಿ ದೇವಾಲಯ ಉದ್ಘಾಟನೆಗೊಳ್ಳಲಿದೆ ಎಂದು ಶ್ರೀ ಮಠದ ಕಾರ್ಯದರ್ಶಿ ಸೋಮೇಶ್ವರನಾಥಸ್ವಾಮಿ ತಿಳಿಸಿದರು.
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಿರಿಯ ಮುಖಂಡರಾದ ಡಾ.ಎಂ.ಪುಟ್ಟೇಗೌಡ, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಒಕ್ಕಲಿಗ ಸಂಘಟನೆ ಮುಖಂಡ ಇಂದ್ರಕುಮಾರ್ ಅವರೊಂದಿಗೆ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಕಟ್ಟಡ ಮತ್ತು ದೇವಾಲಯದ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಮಠದ ಹಿರಿಯ ಶ್ರೀಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶಯವು ಪಟ್ಟಣದಲ್ಲಿ ಸಾಕಾರಗೊಳ್ಳತ್ತಿದ್ದು, ಅವರ 81ನೇ ಜಯಂತ್ಯುತ್ಸವದ ಅಂಗವಾಗಿ ಅದೇ ದಿನ ಉದ್ಘಾಟನಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಮಾ.14ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥಸ್ವಾಮಿ ಅವರು ಲೋಕಾರ್ಪಣೆಗೊಳಿಸುವ ಕಾರ್ಯ ನೆರವೇರಿಸಿಕೊಡಲಿದ್ದಾರೆ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಕ್ಷೇತ್ರದ ಶಾಸಕರೂ ಸೆಸ್ಕ್ ಅಧ್ಯಕ್ಷರು ಆದ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಸೇರಿದಂತೆ ಹಲವಾರು ಗಣ್ಯರು, ಸಮಾಜ ಮತ್ತು ಸಮುದಾಯದ ವಿವಿಧ ಮುಖಂಡರು ಭಾಗಿಯಾಗಲಿದ್ದು, ಜನರು ಆಗಮಿಸುವಂತೆ ಮನವಿ ಮಾಡಿದರು.
ಸಂಸ್ಥೆಯ ಪ್ರಾಂಶುಪಾಲ ಅಶ್ವಥ್, ಶಾಲಾ ವ್ಯವಸ್ಥಾಪಕ ಬೋರೇಗೌಡ, ಉದ್ಯೋಗದಾತ ಸಂಸ್ಥೆಯ ಮುಖ್ಯಸ್ಥ ರುಕ್ಮಾಂಗದ, ಚಂದ್ರು, ಗೋಪಾಲ್ ಗೌಡ,ಮಂಜುನಾಥ್ ಇತರರು ಈ ವೇಳೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net