ಜಾನಪದ ಎಂದಿಗೂ ನಶಿಸುವುದಿಲ್ಲ: ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅಭಿಮತ

ಪಾಂಡವಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಎಲ್.ಚಂದ್ರ ಅವರಿಗೆ ಪರಿಷತ್‌ನ ಬಾವುಟ ನೀಡಿ ಅಭಿನಂದಿಸಲಾಯಿತು.
ಪಾಂಡವಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಎಲ್.ಚಂದ್ರ ಅವರಿಗೆ ಪರಿಷತ್‌ನ ಬಾವುಟ ನೀಡಿ ಅಭಿನಂದಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ
  • ಲಕ್ಷ್ಮೀಸಾಗರದ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಪಾಂಡವಪುರ: ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಆಧುನೀಕರಣದ ಭರಾಟೆ ಜೋರಾಗಿದೆ. ಆದಾಗ್ಯೂ ಜಾನಪದ ಎಂದಿಗೂ ನಶಿಸುವುದಿಲ್ಲ. ಬದಲಿಗೆ ಕಾಲಕ್ರಮಣದಲ್ಲಿ ಪರಿವರ್ತನೆಗೊಳ್ಳುತ್ತದೆ ಎಂದು ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅಭಿಪ್ರಾಯಿಸಿದರು.
ತಾಲೂಕಿನ ಲಕ್ಷ್ಮೀಸಾಗರದ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಮಾನವೀಯ ಮೌಲ್ಯ ಹಾಗೂ ಜೀವನದ ಪಾಠ ಒಳಗೊಂಡಿರುತ್ತದೆ. ಸರ್ಕಾರ ಮೂಲ ಜಾನಪದ ಕಲಾವಿದರ ಮಾಸಾಶನವನ್ನು 5000 ರೂ.ಗೆ ಏರಿಸಬೇಕು. ಅಂತೆಯೇ ವಯೋಮಿತಿಯನ್ನು 45 ವರ್ಷಕ್ಕೆ ಇಳಿಸಬೇಕು. ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಶೇ.2ರಷ್ಟು ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿಷತ್ ಜಿಲ್ಲಾಧ್ಯಕ್ಷ ಡಾ.ವಿಜಯ್‌ಕೊಪ್ಪ ಮಾತನಾಡಿ, ಜಿಲ್ಲೆಯಲ್ಲಿ ಜಾನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆಗಾಗಿ ಪರಿಷತ್ ಘಟಕ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಘಟಕ ಮಾಡಲಾಗುವುದೆಂದು ತಿಳಿಸಿದರು.
ರಾಮನಗರ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ರಾಮನಗರ ಹಾಗೂ ಮಂಡ್ಯ ಜಿಲ್ಲೆ ಜಂಟಿ ಸಮ್ಮೇಳನ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಪಾಂಡವಪುರ ತಾಲೂಕು ಅಧ್ಯಕ್ಷರಾಗಿ ಎಲ್.ಚಂದ್ರ ಅವರನ್ನು ಆಯ್ಕೆ ಮಾಡಲಾಯಿತು. ಜಾನಪದ ಕಲಾವಿದ ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಬಿ.ಕೆಂಪೇಗೌಡ, ಕೃಷ್ಣೇಗೌಡ, ಶಿವಣ್ಣಗೌಡ, ಅಖಿಲೇಶ್, ಭಾರತಿ ಕುಮಾರ್ ಉಪಸ್ಥಿತರಿದ್ದರು. ಕೆರೆತಣ್ಣೂರಿನ ಸ್ವಾಮೀಗೌಡ ಹಾಗೂ ಆಕಾಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net