ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ ವತಿಯಿಂದ ತಾಲೂಕಿನ ಗೊರವಾಲೆ ಗ್ರಾಮದ ಉಪನ್ಯಾಸಕ ಮಧುಸೂದನ್ ನರಸಿಂಹೇಗೌಡ ಅವರ ನಿವಾಸದಲ್ಲಿ ಆಯೋಜಿಸಿದ್ದ ’ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಓದಿದಷ್ಟು ಸುಖ, ಶಾಂತಿ. ಜ್ಞಾನವನ್ನು ಹಂಚಿದಷ್ಟು ಅಕ್ಷಯವಾಗುತ್ತದೆ. ರೀಲ್ಸ್, ವಾಟ್ಸ್‌ಆ್ಯಪ್, ಚಾಟಿಂಗ್‌ನಲ್ಲಿ ಮುಳುಗಿರುವ ಯುವ ಜನರನ್ನು ಓದಲು ಕರೆ ತರಬೇಕು. ಪುಸ್ತಕದಿಂದ ಜ್ಞಾನ ವೃದ್ಧಿ, ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಬಳಸುವುದರಿಂದ ಪರಿಸರ ರಕ್ಷಣೆ ಆಗುತ್ತದೆ. ಮನೆಗೊಂದು ಮರ ಊರಿಗೊಂದು ವನ ರೀತಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯವಿರಬೇಕು. ಮರಗಳಿಂದ ಪರಿಸರ ಉಳಿದರೆ, ಗ್ರಂಥಾಲಯಗಳಿಂದ ಜನರು ಬುದ್ಧಿವಂತರಾಗುತ್ತಾರೆ ಎಂದು ತಿಳಿಸಿದರು.