ಚಾಲಕ ಮಹಮದ್ ಬಿಲಾಲ್ ಬಂಧಿತ ಆರೋಪಿ. ಚುಂಚನಕಟ್ಟೆಯಿಂದ ತಮಿಳುನಾಡಿನ ಕಾಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿದ ಪಿಎಸೈ ಜಗದೀಶ್ ಧೂಳ್‌ಶೆಟ್ಟರ್ ಮತ್ತು ಸಿಬ್ಬಂದಿ ಕೆ.ಆರ್.ಸಾಗರ ಪಟ್ಟಣ ಬಳಿ ವಾಹನ ತಡೆದು ತಪಾಸಣೆ ನಡೆಸಿದರು. ಈ ವೇಳೆ ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದು ತಿಳಿಯಿತು.