ಆರ್‌ಎಸ್‌ಎಸ್ ಸಂಘಟನೆಯ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಅಕ್ಷಯ್ ಜೀ ಹಿಂದೂ ಸಮಾಜೋತ್ಸವದ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ನೇತ್ರ ತಜ್ಞೆ ವೈದ್ಯೆ ಡಾ.ಮಣಿಕರ್ಣಿಕಾ ಮಾತನಾಡಿದರು. ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮಾಜಿ ಅಧ್ಯಕ್ಷ ಕೆ.ನಾಗಣ್ಣಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ತಾಲೂಕು ಅಧ್ಯಕ್ಷ ಧನಂಜಯ, ಟೌನ್ ಅಧ್ಯಕ್ಷ ಎನ್.ಸೋಮಶೇಖರ್, ಆರ್‌ಎಸ್‌ಎಸ್ ಸಂಘಟನೆಯ ಭರತ್ ರಾಜ್, ಅರುಣ ಸೇರಿದಂತೆ ಹಲವರು ಭಾಗವಹಿಸಿದ್ದರು.