ಕಿಕ್ಕೇರಿ ಹೋಬಳಿಯ ಬೂವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕ ಡಿ.ಎಲ್. ಮಹೇಶ್ ಅವರಿಗೆ ಗ್ರಾಮಸ್ಥರು ಶುಕ್ರವಾರ ಬೀಳ್ಕೊಡುಗೆ ನೀಡಿದರು. ಅನಿಲ್‌ಕುಮಾರ್, ಎಲ್.ಎಸ್, ಧರ್ಮಪ್ಪ, ಶ್ವೇತಾ ಕುಮಾರ್, ಶಿವಲಿಂಗ, ರಾಮೇಗೌಡ, ಶ್ರೀನಿವಾಸ್, ಪುಟ್ಟಪ್ಪ, ಮಂಜುನಾಥ್ ಇತರರು ಇದ್ದರು.
ಕಿಕ್ಕೇರಿ: ಸರ್ಕಾರಿ ಶಾಲೆ ಉಳಿದರೆ ಹಳ್ಳಿಯ ಶಾಲೆ, ಬಡಮಕ್ಕಳ ಶಿಕ್ಷಣ ಉಜ್ವಲವಾಗಲಿದೆ ಎಂದು ನಿವೃತ್ತ ಶಿಕ್ಷಕ ಡಿ.ಎಲ್. ಮಹೇಶ್ ಹೇಳಿದರು.
ಹೋಬಳಿಯ ಬೂವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಅವರಿಗೆ ಗ್ರಾಮಸ್ಥರು ಶುಕ್ರವಾರ ನೀಡಿದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಎಲ್ಲವನ್ನೂ ಉಚಿತವಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ನೀಡುತ್ತಿದೆ. ಪಾಲಕರು ಸದ್ಭಳಕೆ ಮಾಡಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಶಿಕ್ಷಣ ಭವಿಷ್ಯದ ಬ್ರಹ್ಮಾಸ್ತ್ರವಾಗಿದೆ. ಕಡ್ಡಾಯವಾಗಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ಮನವಿ ಮಾಡಿದರು. ಗ್ರಾಮಸ್ಥರು ಹಾಗೂ ವಿವಿಧ ಶಾಲಾ ಶಿಕ್ಷಕರು ಶಿಕ್ಷಕ ಡಿ.ಎಲ್. ಮಹೇಶ್ ಹಾಗೂ ಜಯಂತಿ ದಂಪತಿಗೆ ಸನ್ಮಾನ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್, ಧರ್ಮಪ್ಪ, ನವೀನ್‌ಕುಮಾರ್, ಕೆ.ಎಸ್. ಮಂಜುನಾಥ್, ದೊರೆಸ್ವಾಮಿ, ಶ್ರೀನಿವಾಸ್, ಕೋದಂಡರಾಮು, ಶ್ರೀನಿವಾಸ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ಶ್ವೇತಾ ಕುಮಾರ್, ಶಿವಲಿಂಗ, ರಾಮೇಗೌಡ, ಪುಟ್ಟಪ್ಪ ಇತರರು ಇದ್ದರು.