ಗ್ರಾಮದ ವೃದ್ಧೆ ಬಿ.ಟಿ.ವಿಜಯಾ ವಾಸವಿದ್ದ ಮನೆಯ ಛಾವಣಿ ಸಂಪೂರ್ಣ ಹಾರಿ ಹೋಗಿದ್ದು, ಮನೆಯೊಳಗಿದ್ದ ಗೃಹಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು ಮಳೆ ನೀರಿನಿಂದ ಹಾನಿಯಾಗಿವೆ. ತಕ್ಷಣ ಅಕ್ಕ-ಪಕ್ಕದ ನಿವಾಸಿಗಳು ಸಹಾಯಕ್ಕೆ ಮುಂದಾಗಿ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ವಿಚಾರ ತಿಳಿದು ರಾಜಸ್ವ ನೀರಿಕ್ಷಕ ಭಾಸ್ಕರ್ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಹಾನಿಗೊಂಡಿದ್ದ ಮನೆಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.