ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಹೋಮ-ಹವನ

ಪಾಂಡವಪುರ ತಾಲೂಕಿನ ಚಿನಕುರಳಿ ಬಿಜಿಎಸ್ ಶಾಲೆಯಲ್ಲಿ ಲಿಂಗೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಹೋಮ-ಹವನ, ಪೂಜಾ ಕೈಂಕರ್ಯಗಳು ಜಗುಗಿದವು.
ಪಾಂಡವಪುರ ತಾಲೂಕಿನ ಚಿನಕುರಳಿ ಬಿಜಿಎಸ್ ಶಾಲೆಯಲ್ಲಿ ಲಿಂಗೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಹೋಮ-ಹವನ, ಪೂಜಾ ಕೈಂಕರ್ಯಗಳು ಜಗುಗಿದವು.
Published on
ಪಾಂಡವಪುರ: ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ವಿಶೇಷವಾಗಿ ನಡೆದ ಹೋಮ-ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನಡೆಸಿಕೊಟ್ಟರು.
ಬಳಿಕ ಮಾತನಾಡಿದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು, ಹೇಮಗಿರಿ ಶಾಖಾ ಮಠದ ವತಿಯಿಂದ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ವಿಶೇಷವಾಗಿ ನಡೆದ ಹೋಮ-ಹವನ, ಪೂಜಾಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಜ.12ರಿಂದ ಆರಂಭಗೊಂಡಿರುವ ಪೂಜಾ ಕಾರ್ಯಕ್ರಮ ಜ.28ರವರೆಗೆ ನಿರಂತರವಾಗಿ ಹೇಮಗಿರಿ ಶಾಖಾ ಮಠದ ಎಲ್ಲ ಶಾಲೆಗಳಲ್ಲೂ ನಡೆಸಲಾಗುತ್ತಿದೆ ಎಂದರು.
ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಮಠಕ್ಕೆ ಕೊಟ್ಟ ಸೇವಾಕಾರ್ಯ, ಕೆಲಸದಿಂದಾಗಿ ಮಠವು ಸಮಾಜದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಆ ಮೂಲಕ ಮಠವು ಹಲವಾರು ಸಾಮಾಜಿಕ ಕೆಲಸಗಳನ್ನು ಸಹ ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಹಾಗಾಗಿ ಗುರುಗಳು ನಮ್ಮೊಡನೆ ದೈಹಿಕವಾಗಿ ಇಲ್ಲವಾಗಿದ್ದರೂ ಮಾನಸಿಕವಾಗಿ ನಾವೆಲ್ಲರೂ ಅವರನ್ನು ಇಂತಹ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ಮರಿಸುವ ಕೆಲಸವನ್ನು ಪ್ರತಿವರ್ಷವು ನಡೆಸಿಕೊಂಡು ಬರುತ್ತಿದ್ದೇವೆ. ಕಾರ್ಯಕ್ರಮ, ಹೋಮ-ಹವನ ನಡೆಸುವ ಮೂಲಕ ಮಠದ ಶಾಲೆಗಳ ಎಲ್ಲ ಶಿಕ್ಷಕರು, ಸಿಬ್ಬಂದಿ, ಪಾಲಕರು ಸಹ ಭಾಗವಹಿಸಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ. ನಂತರ ಸಂಜೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಿ ಮಕ್ಕಳು ವರ್ಷವಿಡೀ ಕಲಿತಿರುವ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅನುವು ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ, ಆಮೂಲಕ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಬೆಳೆಸುವ ಕೆಲಸವನ್ನು ನಮ್ಮ ಶಾಲೆ ಮಾಡುತ್ತಿದೆ ಎಂದು ಹೇಳಿದರು.
ಪೂಜಾ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ವಸಂತ್‌ಕುಮಾರ್, ಸದಸ್ಯರಾದ ಜಯಲಕ್ಷ್ಮೀ, ಕೃಷ್ಣೇಗೌಡ, ಪರಮೇಶ್, ಸಿ.ಡಿ.ಮಹದೇವು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಗೃಹನಿರ್ಮಾಣ ಮಂಡಳಿಯ ನಿರ್ದೇಶಕ ಬಿ.ಎಸ್.ಜಯರಾಮು, ಪ್ರಾಂಶುಪಾಲ ಚಿದಂಬರ್ ಸೇರಿದಂತೆ ಶಿಕ್ಷಕರು, ಮುಖಂಡರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net