ಹಿಂದೂಗಳ ಸಂಖ್ಯಾಬಲ, ಸಂಘಟನೆ ಅವಶ್ಯ

ಕಿಕ್ಕೇರಿ ಬ್ರಹ್ಮೇಶ್ವರ ದೇಗುಲದಲ್ಲಿ ಶನಿವಾರ ಹಿಂದೂ ಸಮಾಜೋತ್ಸವ ಸಮಿತಿಯಿಂದ ಜರುಗಿದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಬಾಳೆಹೊನ್ನೂರು ಶಾಖಾಮಠದ ತೆಂಡೆಕೆರೆ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರಮೇಶ್‌ಜೀ, ಬೀರನಹಳ್ಳಿ ನಾಗಣ್ಣ ಮತ್ತಿತರರಿದ್ದರು.
ಕಿಕ್ಕೇರಿ ಬ್ರಹ್ಮೇಶ್ವರ ದೇಗುಲದಲ್ಲಿ ಶನಿವಾರ ಹಿಂದೂ ಸಮಾಜೋತ್ಸವ ಸಮಿತಿಯಿಂದ ಜರುಗಿದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಬಾಳೆಹೊನ್ನೂರು ಶಾಖಾಮಠದ ತೆಂಡೆಕೆರೆ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರಮೇಶ್‌ಜೀ, ಬೀರನಹಳ್ಳಿ ನಾಗಣ್ಣ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೆಂಡೆಕೆರೆಯ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅಭಿಮತ
ಕಿಕ್ಕೇರಿ : ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಸಂಖ್ಯಾಬಲ ಹೆಚ್ಚಳದ ಜತೆಗೆ ಸಂಘಟನೆ ಬಹಳ ಅವಶ್ಯವಿದೆ ಎಂದು ಬಾಳೆ ಹೊನ್ನೂರು ಶಾಖಾಮಠದ ತೆಂಡೆಕೆರೆಯ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಬ್ರಹ್ಮೇಶ್ವರ ದೇಗುಲದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಶನಿವಾರ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಆಶೀರ್ವಚನ ನುಡಿಯಾಡುತ್ತ, ಆರ್‌ಎಸ್‌ಎಸ್, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತಿತರ ಸಂಘ ಸಂಸ್ಥೆಗಳು ಹಿಂದೂಪರ ದೇಶಭಕ್ತರ ಸಂಘಟನೆಗಳಾಗಿವೆ. ಇಂತಹ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯಂತೆ ಸರ್ಕಾರ ಬಿಂಬಿಸುವುದು ತರವಲ್ಲ. ಕುರ್ಚಿಗಾಗಿ ರಾಜಕೀಯ ದ್ವೇಷ ಬಿಡಿ. ಹಿಂದೂ ಧರ್ಮ ಸಂರಕ್ಷಣೆಗಾಗಿ ಶ್ರಮಿಸುವವರಿಗೆ ಕಡಿವಾಣ ಹಾಕದಿರಿ ಎಂದು ಎಚ್ಚರಿಸಿದರು. 
ನಮ್ಮ ದೇಶ ಉಳಿವಿಗೆ ಹಿಂದೂಗಳ ಸಂಖ್ಯಾಬಲ ಮುಖ್ಯ. ಸಂಘ ಪರಿವಾರ ಯಾವುದೇ ರಾಜಕೀಯ ಪಕ್ಷದ ಮುಖವಾಣಿಯಲ್ಲ. ಸಂಘ ಪರಿವಾರಕ್ಕೆ ನೂರು ವರ್ಷ ಸಂದಿದೆ. ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸಿದರೆ ಹಿಂದೂ ಸಾಮ್ರಾಜ್ಯ ಗಟ್ಟಿಯಾದಂತೆ. ಪ್ರಪಂಚದಲ್ಲಿ ನೂರಾರು ಧರ್ಮಗಳಲ್ಲಿ ಹಿಂದೂ ಧರ್ಮ ಪರಮ ಪವಿತ್ರವಾಗಿದೆ. 9600ರಲ್ಲಿ ಶ್ರೀರಾಮ ಜನಿಸಿದ್ದು, ಇದಕ್ಕಿಂತಲೂ ಮುನ್ನ ಹಿಂದೂ ಧರ್ಮ ಇತ್ತು. ಹಿಂದೂ ಧರ್ಮ, ಸಂಘಟನೆ ಎಂದೂ ಕಲಹ, ವಿಷ ಬೀಜ ಬಿತ್ತುವ ಸಾಮಾಜಿಕ ಘಾತುಕ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅರಿಯಬೇಕಿದೆ ಎಂದರು. 
ನಮ್ಮ ಬದುಕುತ್ತಿರುವುದು ಹಿಂದೂ ರಾಷ್ಟ್ರದಲ್ಲಿ ಗಾಳಿ, ನೆಲ, ಜಲ ಎಲ್ಲವೂ ಹಿಂದೂ ಸಾಮ್ರಾಜ್ಯದಾಗಿದೆ. ಹೀಗಿರುವಾಗ ಹಿಂದೂ ಧರ್ಮದ ಉಳಿವಿಗೆ ಹೋರಾಟ, ಬದುಕುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ಹಿಂದೂ ರಾಷ್ಟ್ರವನ್ನು ಮುಸ್ಲಿಮರು ಲೂಟಿ ಮಾಡಿ, ಹಿಂದೂ ದೇಗುಲ ಹಾಳು ಮಾಡಿದರು. ನಗನಾಣ್ಯ ದೋಚಿದರು. ಆದರೂ ನಮ್ಮ ಹಿಂದೂ ರಾಷ್ಟ್ರ ಸಂಪತ್ಭರಿತವಾಗಿದೆ. ಸಂಸ್ಕೃತಿ, ಸಂಸ್ಕಾರ ಉಳಿದಿದೆ. ಇದು ಹಿಂದೂ ದೇಶದ ಶಕ್ತಿ ಆಗಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಕಗ್ಗೊಲೆ ನಡೆಯಿತು. ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚುತ್ತಿದೆ. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿದೆ. ಸರ್ಕಾರ ಕಣ್ಣುಮುಚ್ಚಿದೆ, ಹಿಂದೂ ಸಂಘಟನೆಗೆ ಕಡಿವಾಣ ಹಾಕಲು ಮಾತ್ರ ಎಚ್ಚರವಾಗಿದೆ ಎಂದು ಬೇಸರಿಸಿದರು. 
ಗ್ರಾಮವಿಕಾಸ ಅಖಿಲ ಭಾರತ ಟೋಳಿ ಸದಸ್ಯ ರಮೇಶ್ ಜೀ ಮಾತನಾಡಿ, ದೇಶಭಕ್ತಿ ಹಿಂದೂ ಸಂಘಟನೆ ಉಸಿರು. ಅರ್‌ಎಸ್ ಎಸ್‌ನಲ್ಲಿ  ಅಧಿಕಾರವಿಲ್ಲ, ಜವಾಬ್ದಾರಿ ಇದೆ. ಹಿಂದೂ ಧರ್ಮದ ವೈಶಾಲ್ಯತೆಯನ್ನು ವಿವೇಕಾನಂದರು ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ತಿಳಿಸಿ ವಿಶ್ವಕ್ಕೆ ಭಾರತ ದೇಶ ಪರಿಚಯ ಮಾಡಿಕೊಟ್ಟಿದ್ದಾರೆ. ಇಂತಹ ಹಿಂದೂ ಧರ್ಮದ ಸಂಘಟನೆಗಳಿಗೆ ಕಡಿವಾಣ ಹಾಕುವುದು ಸರಿಯಲ್ಲ ಎಂದರು. 
ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಂದೆಮಾತರಂ ಗೀತೆ ಹಾಡುವ ಮೂಲಕ ಭಾರತಾಂಬೆಗೆ ನಮಿಸಿದರು. ಅಕ್ಷಯ್, ಪುನೀತ್, ತಮ್ಮಣ್ಣಗೌಡ, ಕೃಷ್ಣೇಗೌಡ, ರಾಜಶೇಖರ್, ಸೋಮಣ್ಣ, ವಿಜಯ್, ಪವನ್, ಯತೀಶ್ ಮತ್ತಿತರರಿದ್ದರು. ನಾಗಮಂಗಲ ಉಪವಿಭಾಗ ಡಿವೈಎಸ್‌ಪಿ ಚಲುವರಾಜು, ಇನ್‌ಸ್ಪೆಕ್ಟರ್ ಎಸ್.ಎನ್. ಜಯರಾಂ ಬಿಗಿ ಬಂದೋಬಸ್ತ್  ಮಾಡಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net