ಹೈಮಾಸ್ಟ್ ದೀಪ ಉದ್ಘಾಟನೆ

ಚಾಮನಹಳ್ಳಿಯ ರಂಗ ಮಂದಿರ ಆವರಣದಲ್ಲಿ ಅಂದಾಜು 11 ಲಕ್ಷ ರೂ. ವೆಚ್ಚದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅನುದಾನದಲ್ಲಿ ನಿರ್ಮಿಸಲಾಗಿರುವ ಐ ಮಾಸ್ಟ್ ದೀಪವನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಉದ್ಘಾಟನೆ ಮಾಡಿದರು. ಸಿ.ಎನ್.ಕೃಷ್ಣ, ಸಿದ್ದರಾಜು, ಸತೀಶ್, ವಿಜಯ್‌ಗೌಡ, ಕಾಡಯ್ಯ, ರಾಮಸ್ವಾಮಿ ಇದ್ದರು.

Published on
ಮದ್ದೂರು: ಚಾಮನಹಳ್ಳಿಯ ರಂಗ ಮಂದಿರ ಆವರಣದಲ್ಲಿ ಅಂದಾಜು 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೈಮಾಸ್ಟ್ ದೀಪವನ್ನು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಬುಧವಾರ ಉದ್ಘಾಟನೆ ಮಾಡಿದರು.
ಈ ವೇಳೆ ಮಾತಾಡಿದ ಅವರು, ಸ್ಥಳೀಯ ಮುಖಂಡರ ಬೇಡಿಕೆಯಂತೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿಯಲ್ಲಿ ಮನವಿ ಮಾಡಿ ಸಿಆರ್‌ಎಸ್ ಫಂಡ್ ಮೂಲಕ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ತಾಲೂಕಿನ ವಿವಿಧ ಭಾಗದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎನ್.ಕೃಷ್ಣ, ಸಿದ್ದರಾಜು, ಸತೀಶ, ಮುಖಂಡರಾದ ವಿಜಯಗೌಡ (ರಾಕಿ), ಕಾಡಯ್ಯ, ರಾಮಸ್ವಾಮಿ, ಶಿವಣ್ಣ, ಕೃಷ್ಣ, ಮಹದೇವ್, ಶೇಖರ್, ಪ್ರದೀಪ, ಅರ್ಜುನ, ಕೃಷ್ಣ, ಮುನೀಶ್, ಸ್ವಾಮಿಗೌಡ, ಪುರುಷೋತ್ತಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net