ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ

ಮದ್ದೂರು  ತಾಲೂಕಿನ ಶಿವಾರಗುಡ್ಡ ಗ್ರಾಮದ ಜವಾಹರ ನವೋದಯ ವಿದ್ಯಾನಿಲಯದ ಎಂಪಿ ಸಭಾಂಗಣದಲ್ಲಿ ಪಾಲಕರ-ಶಿಕ್ಷಕರ ಸಭೆ (ಪಿಟಿಸಿ)ಯಲ್ಲಿ ಪ್ರಾಂಶುಪಾಲ ವಿ.ಪ್ರಸಾದ್ ಮಾತನಾಡಿದರು. ಎಂ.ಸತ್ಯಲಿಂಗಂ, ಅನುಪಮ, ಸೌಮ್ಯ, ಅಣ್ಣೂರು ಸತೀಶ್,  ಬಸವರಾಜು ವಿ. ಬನ್ನೂರು, ಸುಭಾಷ್‌ಎಲ್. ಚಿನ್ನಕಟ್ಟಿ ಇದ್ದರು.
ಮದ್ದೂರು ತಾಲೂಕಿನ ಶಿವಾರಗುಡ್ಡ ಗ್ರಾಮದ ಜವಾಹರ ನವೋದಯ ವಿದ್ಯಾನಿಲಯದ ಎಂಪಿ ಸಭಾಂಗಣದಲ್ಲಿ ಪಾಲಕರ-ಶಿಕ್ಷಕರ ಸಭೆ (ಪಿಟಿಸಿ)ಯಲ್ಲಿ ಪ್ರಾಂಶುಪಾಲ ವಿ.ಪ್ರಸಾದ್ ಮಾತನಾಡಿದರು. ಎಂ.ಸತ್ಯಲಿಂಗಂ, ಅನುಪಮ, ಸೌಮ್ಯ, ಅಣ್ಣೂರು ಸತೀಶ್, ಬಸವರಾಜು ವಿ. ಬನ್ನೂರು, ಸುಭಾಷ್‌ಎಲ್. ಚಿನ್ನಕಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಂಶುಪಾಲ ವಿ.ಪ್ರಸಾದ್ ಅಭಿಮತ
  • ಪಾಲಕರ-ಶಿಕ್ಷಕರ ಸಭೆ
ಮದ್ದೂರು; ತಾಲೂಕಿನ ಶಿವಾರಗುಡ್ಡ ಗ್ರಾಮದ ಜವಾಹರ ನವೋದಯ ವಿದ್ಯಾನಿಲಯದ ಎಂಪಿ ಸಭಾಂಗಣದಲ್ಲಿ ಪಾಲಕರ-ಶಿಕ್ಷಕರ ಸಭೆ (ಪಿಟಿಸಿ) ಭಾನುವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿ.ಪ್ರಸಾದ್ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಕಲಿಕೆಗಾಗಿ ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಭೋಜನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪಾಲಕರು ಮಕ್ಕಳಿಗೆ ಜಂಕ್ ಫುಡ್ ನೀಡಬಾರದು ಹಾಗೂ ಹೋಟೆಲ್ ಆಹಾರವನ್ನು ತಂದುಕೊಡದೆ, ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರವನ್ನು ನೀಡುವಂತೆ ಸಲಹೆ ನೀಡಿದರು.
ಪಾಲಕರ ಭೇಟಿಯ ಸಂದರ್ಭದಲ್ಲಿ ಮೊಬೈಲ್ ಬಳಸುವುದಕ್ಕಿಂತ ಮಕ್ಕಳೊಂದಿಗೆ ಮುಖಾಮುಖಿಯಾಗಿ ಮಾತನಾಡಿ, ಅವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುವಂತಹ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.
ಉಪಪ್ರಾಂಶುಪಾಲ ಎಂ.ಸತ್ಯಲಿಂಗಂ ಮಾತನಾಡಿ, ಈ ಹಿಂದೆ ಪಾಲಕರ-ಶಿಕ್ಷಕರ ಸಮಿತಿ (ಪಿಟಿಸಿ) ಸದಸ್ಯರು ಶಾಲೆಯ ಅಭಿವೃದ್ಧಿಗೆ ಉತ್ತಮ ಬೆಂಬಲ ನೀಡಿದ್ದರು. ಹೊಸದಾಗಿ ಆಯ್ಕೆಯಾಗುವ ಸದಸ್ಯರು ಸಹ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿ ಶನಿವಾರ ಶಾಲಾ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ನಂತರ ಪಿಟಿಸಿ ಸದಸ್ಯರಾದ ಅನುಪಮಾ, ಸೌಮ್ಯ ಹಾಗೂ ಅಣ್ಣೂರು ಸತೀಶ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ನೂತನ ಪಾಲಕರ-ಶಿಕ್ಷಕರ ಸಮಿತಿ (ಪಿಟಿಸಿ) ರಚಿಸಲಾಯಿತು. ಇದೇ ವೇಳೆ ಹಿಂದಿನ ಸಮಿತಿಯ ಸದಸ್ಯರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಚೇರಿ ಅಧೀಕ್ಷಕ ಗಣೇಶ್ ಅವರು ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಶಿಕ್ಷಕರಾದ ಬಸವರಾಜು ವಿ.ಬನ್ನೂರು, ಸುಭಾಷ್‌ಎಲ್.ಚಿನ್ನಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net