ಫಲಾನುಭವಿಗಳಿಗೆ ಕೀಲಿಕೈ ಹಸ್ತಾಂತರ
ಇದೇ ವೇಳೆ ಕೃಷಿ ಇಲಾಖೆಯಿಂದ 13 ಜನ ಫಲಾನುಭವಿಗಳಿಗೆ ಹಾರ್ವೆಸ್ಟ್ ಹಬ್ ಯಂತ್ರಗಳ ಕೀಲಿಕೈಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹಸ್ತಾಂತರಿಸಿ ಶುಭ ಹಾರೈಸಿದರು. ಇದರೊಂದಿಗೆ ಜಿಲ್ಲೆಯಲ್ಲಿ 2023-24ರಿಂದ 2025-26ನೇ ಸಾಲಿನವರೆಗೆ 19 ಜನರಿಗೆ ಹಾರ್ವೆಸ್ಟ್ ಹಬ್ ಯಂತ್ರ ವಿತರಣೆ ಮಾಡಲಾಯಿತು.
ಇನ್ನು ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಸಂಯೋಜಿತ ಹಾರ್ವೆಸ್ಟ್ ಯಂತ್ರಗಳಿಂದ ಕಟಾವು ಮಾಡಲು ಭತ್ತದ ಬೆಳೆ 75,231 ಹೆಕ್ಟೇರ್, ರಾಗಿ 66,423 ಹೆಕ್ಟೇರ್, ನವಣೆ 16 ಹೆಕ್ಟೇರ್, ಸಾಮೆ 9 ಹೆಕ್ಟೇರ್, ಹೆಸರು 467 ಹೆಕ್ಟೇರ್ ಬೆಳೆ ಇದೆ. ಕಳೆದ ಒಂದು ವರ್ಷದಲ್ಲಿ ಭತ್ತ ಅಂದಾಜು 2,700 ಎಕರೆ, ರಾಗಿ 125 ಎಕರೆ, ಹೆಸರು 200 ಗಂಟೆ, ತೃಣಧಾನ್ಯ 400 ಗಂಟೆ ಕಟಾವು ಮಾಡಲಾಗಿದೆ. ಅಂದರೆ ಜಿಲ್ಲೆಯಲ್ಲಿ ಏಳು ಸಂಯೋಜಿತ ಹಾರ್ವೆಸ್ಟ್ ಯಂತ್ರಗಳಿಂದ ಇದುವರೆಗೆ 31.4 ರಿಂದ 31.9 ಲಕ್ಷ ರೂ ವೈಯಕ್ತಿಕ ಆದಾಯವನ್ನು ಫಲಾನುಭವಿಗಳು ಪಡೆದಿದ್ದು, ಸ್ವ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.