ಊಗಿನಹಳ್ಳಿಯಲ್ಲಿ ಹನುಮಂತೋತ್ಸವ

ಕಿಕ್ಕೇರಿ ಹೋಬಳಿಯ ಊಗಿನಹಳ್ಳಿಯಲ್ಲಿ ಈಚೆಗೆ ಜರುಗಿದ ಹನುಮಂತೋತ್ಸವದಲ್ಲಿ ಮಕ್ಕಳೊಂದಿಗೆ ಹಿರಿಯರು ಬಣ್ಣದ ಓಕುಳಿಯೊಂದಿಗೆ ಸಂಭ್ರಮಿಸಿದರು.
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿಯಲ್ಲಿ ಈಚೆಗೆ ಜರುಗಿದ ಹನುಮಂತೋತ್ಸವದಲ್ಲಿ ಮಕ್ಕಳೊಂದಿಗೆ ಹಿರಿಯರು ಬಣ್ಣದ ಓಕುಳಿಯೊಂದಿಗೆ ಸಂಭ್ರಮಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • Hanumanthotsava
ಕಿಕ್ಕೇರಿ: ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹನುಮದೇವರ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಕುರುಹಿನಶೆಟ್ಟಿ ಸಮಾಜದವರು ಏರ್ಪಡಿಸಿದ್ದ ಪಟ್ಟಾಭಿರಾಮ ದೇವರ ಪೂಜಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹನುಮಂತೋತ್ಸವ ಓಕುಳಿ ಹಬ್ಬದಲ್ಲಿ ಪುಟಾಣಿಗಳು, ಯುವಕರು ಬಣ್ಣ ಹಚ್ಚಿಕೊಂಡು ಆಟವಾಡಿ ಸಂಭ್ರಮಿಸಿದರು.
ಉತ್ಸವಕ್ಕೂ ಮುನ್ನ ಹನುಮದೇವರ ಚಿತ್ರಕ್ಕೆ ಪುಷ್ಪಗಳಿಂದ ಅಲಂಕಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅಷ್ಟವಧಾನ, ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಕುರುಹಿನಶೆಟ್ಟಿ ಸಮಾಜದ ಗಣ್ಯರು, ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net