ಶರಣರ ಮೆಚ್ಚುಗೆಗೆ ಪಾತ್ರರಾಗಿದ್ದ ಹಡಪದ ಅಪ್ಪಣ್ಣ

ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಆಚರಿಸಲಾಯಿತು. ಸಂದೇಶ್, ಕೆ.ಟಿ.ಶಿವಕುಮಾರ್, ಶಶಿಕುಮಾರ್, ದಾಕ್ಷಾಯಿಣಿ, ವಿ.ಸಿ.ಉಮಾಶಂಕರ್ ಇದ್ದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಆಚರಿಸಲಾಯಿತು. ಸಂದೇಶ್, ಕೆ.ಟಿ.ಶಿವಕುಮಾರ್, ಶಶಿಕುಮಾರ್, ದಾಕ್ಷಾಯಿಣಿ, ವಿ.ಸಿ.ಉಮಾಶಂಕರ್ ಇದ್ದರು.
Published on
ಮದ್ದೂರು: ನಗರದ ಪ್ರವಾಸಿ ಮಂದಿರದಲ್ಲಿ ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಮದ್ದೂರು ಘಟಕದ ವತಿಯಿಂದ ಬುಧವಾರ ಶ್ರೀ ಹಡಪದ ಅಪ್ಪಣ್ಣ ಜನ್ಮದಿನ ಆಚರಿಸಲಾಯಿತು.
ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್. ಸಂದೇಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಹಡಪದ ಅಪ್ಪಣ್ಣನವರು ವಿಶ್ವ ಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶರಣರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದ ಮೂಢನಂಬಿಕೆಗಳು ಮತ್ತು ಜಾತಿ ತಾರತಮ್ಯ ವಿರೋಧಿಸಿ ತಮ್ಮ ಪ್ರಾಮಾಣಿಕ ಕಾಯಕ ಹಾಗೂ ಸೇವೆಯಿಂದ ಶರಣರಿಂದ ನಿಜಸುಖಿ ಅಪ್ಪಣ್ಣ ಎಂಬ ಬಿರುದು ಪಡೆದಿದ್ದರು ಎಂದು ಹೇಳಿದರು.
ತಾಲೂಕು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಸಂಚಾಲಕ ಶಶಿಕುಮಾರ್, ದಾಕ್ಷಾಯಿಣಿ, ವೆಂಕಟೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್, ಎಂ.ಸಿ.ಲಿಂಗರಾಜು, ದಲಿತ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ರಾಚಯ್ಯ, ಪುಟ್ಟಲಿಂಗಯ್ಯ, ಇಂತಿಯಾಜ್ ಉಲ್ಲಾ ಖಾನ್, ಆಶಿಷ್ ಪಾಷಾ, ಪ್ರಮೀಳಾ, ರುಕ್ಮಿಣಿ, ಶಿವಣ್ಣ, ಮಹಮದ್ ಗೌಸ್, ಜಯರಾಂ, ಚಿಕ್ಕ ನಂಜಾಚಾರಿ, ಸವಿತಾ, ಜಯರಾಂ, ಶ್ರೀನಿವಾಸ್, ಮಂಜು, ನಾಗೇಶ್, ಶಂಕರ್, ಮೋಹನ್, ಅನಿಲ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net