ತಾತ್ವಿಕ ಚಿಂತನೆಯ ವಚನಕಾರ ಹಡಪದ ಅಪ್ಪಣ್ಣ

ನಾಗಮಂಗಲ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಾರಂಭದಲ್ಲಿ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಹಸೀಲ್ದಾರ್ ಅಶೋಕ್, ಸಿಡಿಪಿಒ ಕೃಷ್ಣಮೂರ್ತಿ ಇತರರು ಇದ್ದರು.
ನಾಗಮಂಗಲ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಾರಂಭದಲ್ಲಿ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಹಸೀಲ್ದಾರ್ ಅಶೋಕ್, ಸಿಡಿಪಿಒ ಕೃಷ್ಣಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Hadapada Appanna
ನಾಗಮಂಗಲ: ಅನುಭವ ಮಂಟಪ ಹಾಗೂ ಬಸವಣ್ಣನವರ ಕಾಯಕಕ್ಕೆ ಆಧಾರ ಸ್ಥಂಭವಾಗಿ ಕೆಲಸ ಮಾಡುತ್ತಿದ್ದ ಹಡಪದ ಅಪ್ಪಣ್ಣ ಅವರು ತಾತ್ವಿಕ ಚಿಂತನೆ ಒಳಗೊಂಡ ವಚನಗಳನ್ನು ರಚಿಸಿ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಅಶೋಕ್ ತಿಳಿಸಿದರು.
ತಾಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಮನುಷ್ಯತ್ವ ಹೇಗಿರಬೇಕೆಂಬುದನ್ನು 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟ ಮಾನವತಾವಾದಿ ಬಸವಣ್ಣ. ಅವರ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಸಲಹೆಗಾರರಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಒಬ್ಬ ದಾರ್ಶನಿಕ ವ್ಯಕ್ತಿ ಎಂದು ಬಣ್ಣಿಸಿದರು.
ಸಿಡಿಪಿಒ ಕೃಷ್ಣಮೂರ್ತಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಕಾರ್ಯದರ್ಶಿಯಾಗಿ ಮಹಾಮನೆಯ ವ್ಯವಸ್ಥಾಪಕರಾಗಿ ತಮ್ಮದೇ ಆದ ಸೇವೆ ಸಲ್ಲಿಸಿರುವ ಹಡಪದ ಅಪ್ಪಣ್ಣ ಅವರು ತಳಸಮುದಾಯದ ಶ್ರೇಷ್ಠ ವಚನಕಾರರು. ಅವರ ಪತ್ನಿ ಹಡಪದ ಲಿಂಗಮ್ಮ ಕೂಡ ವಚನಗಾರ್ತಿಯಾಗಿದ್ದರು ಎಂದು ತಿಳಿಸಿದರು.
ಸಮುದಾಯದ ಅಧ್ಯಕ್ಷ ಜಗದೀಶ್, ಮುಖಂಡರಾದ ಎಚ್.ಜಿ.ಸುರೇಶ್, ಉಮೇಶ್, ಎನ್.ವಿ.ಮಧು, ಕೆ.ತಮ್ಮಯ್ಯ, ಎ.ಬಿ.ರಾಮಣ್ಣ, ತಿಮ್ಮಯ್ಯ, ಗಣೇಶ್, ಕಾರ್ತಿಕ್, ಪುನೀತ್‌ಕುಮಾರ್, ಮನು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net