ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಅಬಲವಾಡಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಷ1995-96ನೇ ಸಾಲಿನ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿ.ಪುಟ್ಟಚೆನ್ನಿ, ತಮ್ಮಣ್ಣ, ಜ್ಞಾನಪೂರ್ಣ, ಮಹದೇವಸ್ವಾಮಿ, ಗುರುಸ್ವಾಮಿ, ರಾಜಗೋಪಾಲ್, ಸಿದ್ದಲಿಂಗಸ್ವಾಮಿ, ಉಮೇಶ್‌ಕೊಪ್ಪ, ಭೈರಶೆಟ್ಟಿ, ಕುಮಾರ್ ಇದ್ದರು.
ಮದ್ದೂರು: ವಿದ್ಯೆ ಕಲಿಸಿದ ಶಿಕ್ಷಕರನ್ನು ನೆನೆದು ಗೌರವಿಸುತ್ತಿರುವ ಹಿರಿಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ. ಅಕ್ಷರ ಕಲಿಸಿ ಜೀವನದ ದಾರಿ ತೋರಿರುವ ಗುರುಶಿಷ್ಯರ ಸಂಬಂಧ ಅತಿ ಮಹತ್ವದೆಂದು ನಿವೃತ್ತ ಶಿಕ್ಷಕ ಅಶ್ವತ್ಥಾಮಾಚಾರ್ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಅಬಲವಾಡಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ 1995-96ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ನಡೆಸಿಕೊಟ್ಟ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನಕ್ಕೆ ದಾರಿ ತೋರಿದ ಗುರುಗಳನ್ನು ಗೌರವಿಸುತ್ತಿರುವುದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದ್ದು ಗುರುಶಿಷ್ಯರ ಸಂಬಂಧದ ಪಾವಿತ್ರೃವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ತಮ್ಮಂತೆಯೇ ಉತ್ತಮ ಮಾರ್ಗದತ್ತ ನಡೆದು ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಂದು ಶಿಕ್ಷಕರು ನೀಡಿದ ಶಿಕ್ಷಣದ ಪರಿಪೂರ್ಣತೆಯನ್ನು ಪಡೆದುಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮದೇ ಆದ ಬದುಕನ್ನು ರೂಪಿಸಿಕೊಂಡಿರುವುದು ತಾವು ಅಕ್ಷರಭ್ಯಾಸ ಕಲಿಸಿದ್ದಕ್ಕೂ ಸಾರ್ಥಕ ಎನಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಜಲುಗಳನ್ನು ಪೂರೈಸಲೆಂದು ಶುಭ ಹಾರೈಸಿದರು.
1995-96ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿನ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಸಾರ್ಥಕತೆ ಮೆರೆದರಲ್ಲದೆ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿ ಗೌರವಿಸಿದರು.
ಹಳೆಯ ವಿದ್ಯಾರ್ಥಿಗಳಾದ ಬಿ.ಪುಟ್ಟಚೆನ್ನಿ, ತಮ್ಮಣ್ಣ, ಜ್ಞಾನಪೂರ್ಣ, ಮಹದೇವಸ್ವಾಮಿ, ಗುರುಸ್ವಾಮಿ, ರಾಜಗೋಪಾಲ್, ಸಿದ್ದಲಿಂಗಸ್ವಾಮಿ, ಉಮೇಶ್‌ಕೊಪ್ಪ, ಭೈರಶೆಟ್ಟಿ, ಕುಮಾರ್, ಚನ್ನಮ್ಮ ಹಾಗೂ ಸಾಕಮ್ಮ ಸೇರಿದಂತೆ ಇತರರಿದ್ದರು.