ಗುರುವಂದನೆ ವೃತ್ತಿ ಜೀವನ ಸಾರ್ಥಕ್ಯ

ಮಳವಳ್ಳಿಯ ರೈತ ಸಮುದಾಯ ಭವನದಲ್ಲಿ ಸೋಮವಾರ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ 1994-95ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಆಯೋಜಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಗುರುಗಳನ್ನು ಅಭಿನಂದಿಸಿದರು. ಸೋಮಶೇಖರ್, ಎಸ್.ಡಿ.ಜಯರಾಮು, ಎಸ್.ಚಂದ್ರಶೇಖರ್, ಟಿ.ಎನ್.ಮಲ್ಲಣ್ಣ, ಎಂ.ಎಸ್.ಜಗದೀಶ್, ವೆಂಕಟಗಿರಿಗೌಡ, ಶಾರದಮ್ಮ, ಬಸವರಾಜು  ಇದ್ದರು.
ಮಳವಳ್ಳಿಯ ರೈತ ಸಮುದಾಯ ಭವನದಲ್ಲಿ ಸೋಮವಾರ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ 1994-95ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಆಯೋಜಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಗುರುಗಳನ್ನು ಅಭಿನಂದಿಸಿದರು. ಸೋಮಶೇಖರ್, ಎಸ್.ಡಿ.ಜಯರಾಮು, ಎಸ್.ಚಂದ್ರಶೇಖರ್, ಟಿ.ಎನ್.ಮಲ್ಲಣ್ಣ, ಎಂ.ಎಸ್.ಜಗದೀಶ್, ವೆಂಕಟಗಿರಿಗೌಡ, ಶಾರದಮ್ಮ, ಬಸವರಾಜು ಇದ್ದರು.
Published on
ಮಳವಳ್ಳಿ : ವಿದ್ಯೆ ಕಲಿಸಿದ ಶಿಕ್ಷಕರನ್ನು ನೆನೆದು ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶಿಕ್ಷಕರ ವೃತ್ತಿ ಜೀವನಕ್ಕೆ ಸಿಗುವ ಗೌರವ, ಸಾರ್ಥಕ್ಯ ಎಂದು ನಿವೃತ್ತ ಶಿಕ್ಷಕ ರಾವ್ ಸೋಮಶೇಖರ್ ಅಭಿಪ್ರಾಯಪಟ್ಟರು.
ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 1994-95 ನೇ ಸಾಲಿನ ವಿದ್ಯಾರ್ಥಿಗಳು ಒಗ್ಗೂಡಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರು ಎಂಬ ಪದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಪೂಜ್ಯಭಾವನೆಯಿಂದ ನಾವುಗಳು ಗೌರವಿಸಿಕೊಂಡು ಬಂದಿದ್ದೇವೆ. ಅಂದಿನ ಗುರುಕುಲದ ಶಿಕ್ಷಣದಲ್ಲಿ ಗುರು-ಹಿರಿಯರಿಗೆ ಗೌರವಿಸುವ ಗುಣಗಳೊಂದಿಗೆ ಶಿಕ್ಷಣ ನೀಡಲಾಗುತ್ತಿತ್ತು. ಇಂದಿಗೂ ಅಂತಹ ಕಲಿಕಾ ಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ. ಇದಕ್ಕೆ ಉದಾಹರಣೆಯಾಗಿ ಎರಡು ದಶಕ ಕಳೆದರೂ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿ ಹಿರಿಯ ವಿದ್ಯಾರ್ಥಿಗಳು ಸಮಾಗಮಗೊಂಡು ಗುರುವಂದನೆ ಸಲ್ಲಿಸುವ ಸಮಾರಂಭ ಏರ್ಪಡಿಸಲಾಗಿದೆ. ಮನೋಧರ್ಮಕ್ಕೆ ಅನುಗುಣವಾಗಿ ಶಿಕ್ಷಕ ವೃತ್ತಿ ಜೀವನ ಪೂರೈಸುವ ಮೂಲಕ ಸಮಾಜಕ್ಕೆ ಸುಸಂಸ್ಕೃತ ಹಾಗೂ ಉತ್ತಮ ಪ್ರಜೆಗಳನ್ನು ನೀಡಿದ್ದೇನೆಂಬ ಆತ್ಮತೃಪ್ತಿ ದೊರೆತಿದೆ ಎಂದು ಭಾವುಕರಾದರು.
ನಿವೃತ್ತ ಶಿಕ್ಷಕ ಎಸ್.ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ಯಾಂತ್ರಿಕ ಕಾಲಮಾನದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು, ಹಿರಿಯರನ್ನು ಗೌರವಿಸುವ ವಿಚಾರವಾಗಿ ಮಕ್ಕಳಲ್ಲಿ ಅರಿವು ನೀಡುವ ಕೊರತೆ ಇದೆ. ಇದು ಸಮಾಜಕ್ಕೆ ಮಾರಕವಾಗುವ ಆತಂಕಕಾರಿ ಬೆಳವಣಿಗೆಯಾಗಿದೆ. ಶಾಲೆಗಳಲ್ಲಿ ಗುರು ಮತ್ತು ಪಾಲಕರ ಬಗ್ಗೆ ಗೌರವ ಕೊಡುವ ಮೌಲ್ಯಯುತ ಜಾಗೃತಿಯ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ನಿಧನರಾದ ಶೈಕ್ಷಣಿಕ ಅವಧಿಯ ಸಹಪಾಠಿಗಳು ಹಾಗೂ ಶಿಕ್ಷಕರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
1994-95ರಲ್ಲಿ ಶಿಕ್ಷಕರಾಗಿದ್ದ ರಾವ್ ಸೋಮಶೇಖರ್, ಎಸ್.ಡಿ.ಜಯರಾಮು, ಎಸ್.ಚಂದ್ರಶೇಖರ್, ಟಿ.ಎನ್.ಮಲ್ಲಣ್ಣ, ಎಂ.ಎಸ್.ಜಗದೀಶ್, ವೆಂಕಟಗಿರಿಗೌಡ, ಶಾರದಮ್ಮ, ಬಸವರಾಜು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. 40ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಮಾಗಮಗೊಂಡು ಸಹಪಾಠಿಗಳ ಜತೆಗೆ ತಮ್ಮ ಶೈಕ್ಷಣಿಕ ದಿನಗಳನ್ನು ಮೆಲುಕು ಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net