ದೇವಿಯ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಸಂಪ್ರದಾಯದಂತೆ ಕಾವೇರಿಯ ಸೋಪಾನಕಟ್ಟೆಯಲ್ಲಿ ದೇವರ ಗುಡ್ಡಪ್ಪ ಕರಗ ಹೊತ್ತು ತಂದು ಶಕ್ತಿದೇವಿಗೆ ಮಡಿ ಪೂಜೆ, ಹೂವಿನ ವೈಭವದ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ ರಾತ್ರಿ ಪೂರ ಮಂಗಳವಾರದ ಮುಂಜಾನೆವರೆಗೂ ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳಲ್ಲಿ ಈಡುಗಾಯಿ ಸೇವೆ, ಪಂಜಿನ ಸೇವೆಯೊಂದಿಗೆ ದೇವಿಯ ಕರಗವನ್ನು ಹೊತ್ತ ಗುಡ್ಡಪ್ಪ ಉತ್ಸವವನ್ನು ಜಾನಪದ ಕಲಾತಂಡಗಳು ಮತ್ತು ತಮಟೆ ನಗಾರಿ ವಾದ್ಯಗಳ ಸದ್ದಿನೊಂದಿಗೆ ಹೆಜ್ಜೆ ಹಾಕಿ ಯಶಸ್ವಿಯಾಗಿ ನಡೆಸಿದರು.