ವಿರೋಧಿಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಶಾಸಕ ಪಿ.ರವಿಕುಮಾರ್ ಗಣಿಗ ತಿರುಗೇಟು

ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು.
ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು.
Published on
ಮಂಡ್ಯ: ಟೀಕೆ ಮಾಡುವರು ಮಾಡಿಕೊಂಡು ಕಾಲ ಕಳೆಯಲಿ. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅಭಿವೃದ್ದಿ ಕೆಲಸವನ್ನು ಮಾಡುತ್ತಿರುತ್ತೇವೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಕೆರಗೋಡಿನ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಹಾಗೂ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ನಿರ್ಮಿಸಿರುವ ಪಂಚಾಯಿತಿ ಮೇಲಂತಸ್ತು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆರಗೋಡು ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅನುದಾನ ಬಂದಿರಲಿಲ್ಲ. ಸದಸ್ಯರ ಅವಧಿ ಇನ್ನೇನೂ ಮುಗಿಯುತ್ತದೆ. ಈಗ ಅಭಿವೃದ್ದಿಯಾಗುತ್ತಿವೆ ಎಂದರು.
ಕೆರಗೋಡು ಗ್ರಾಮದಲ್ಲಿ ಆಟೋ ನಿಲ್ದಾಣ ನಿರ್ಮಾಣಕ್ಕೆ 5 ಲಕ್ಷ ರೂ ಬಿಡುಗಡೆಗೊಳಿಸಿ ಅಭಿವೃದ್ದಿ ಮಾಡಲಾಗುತ್ತಿದೆ. ಕೋಡಿದೊಡ್ಡಿ ಗ್ರಾಮದ ರಸ್ತೆ ಅಭಿವೃದ್ದಿಗೆ 3 ಕೋಟಿ ರೂ ಕೊಡಲಾಗಿದೆ. 10 ಕೋಟಿ ರೂ ವೆಚ್ಚದಲ್ಲಿ ಕೆರಗೋಡು ಗ್ರಾಮದ ಪುರಾಣ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುವುದು. ಶಿವರಾತ್ರಿ ಹಬ್ಬದ ಬಳಿಕ ಭೂಮಿ ಪೂಜೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಸಚಿವರು, ಸ್ವಾಮೀಜಿಗಳನ್ನು ಕರೆದು ಅದ್ಧೂರಿಯಾಗಿ ಮಾಡಲಾಗುವುದು. ಅಂತೆಯೇ ದೇವಸ್ಥಾನದ ಎದುರಿನ ಕೆರೆಗೂ ಹೊಸ ಸ್ಪರ್ಶ ನೀಡಲಾಗುವುದು ಎಂದು ಹೇಳಿದರು.
ಕೆರಗೋಡು ಗ್ರಾ.ಪಂ ಅಧ್ಯಕ್ಷ ನವೀನ್‌ಕುಮಾರ್, ಉಪಾಧ್ಯಕ್ಷೆ ನಾಗರತ್ನಾ, ಸದಸ್ಯ ಕೆ.ಜೆ.ಮಹೇಶ್, ಇಂಜನಿಯರ್ ಸೋಮಶೇಖರ್, ಪಿಡಿಒ ವಿನಯ್‌ಕುಮಾರ್, ಕಾರ್ಯದರ್ಶಿ ರತ್ನಮ್ಮ, ಮುಖಂಡ ವಸಂತ್‌ಕುಮಾರ್ ಇತರರಿದ್ದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಮಂಡ್ಯ ವಿಧಾನಸಭಾ ಕ್ಷೇತ್ರದ ಬೆಳ್ಳುಂಡಗೆರೆ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಕೀಲಾರ ಗ್ರಾಮದಲ್ಲಿ ಆರೋಗ್ಯ ಸಮುದಾಯ ಭವನದ ವಾಹನ ನಿಲ್ದಾಣದ ಮೇಲ್ಚಾವಣಿ ಉದ್ಘಾಟನೆ ಮತ್ತು ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ, ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಹಾಗೂ 50 ಲಕ್ಷ ರೂ ವೆಚ್ಚದಲ್ಲಿ ಕೀಲಾರ ಗ್ರಾಮದಿಂದ ದೊಡ್ಡ ಬಾಣಸವಾಡಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net