ಅಧ್ಯಕ್ಷರಾಗಿ ಗೌರೀಶ್, ಉಪಾಧ್ಯಕ್ಷರಾಗಿ ಸಿದ್ದರಾಜು ಆಯ್ಕೆ

ಮಳವಳ್ಳಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಗೆ ಆಯ್ಕೆಯಾದ ಅಧ್ಯಕ್ಷ ಕೆ.ಎನ್.ಗೌರೀಶ್, ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರನ್ನು ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.
ಮಳವಳ್ಳಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಗೆ ಆಯ್ಕೆಯಾದ ಅಧ್ಯಕ್ಷ ಕೆ.ಎನ್.ಗೌರೀಶ್, ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರನ್ನು ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.
Published on
ಮಳವಳ್ಳಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಯ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು.
ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ಗೌರೀಶ್ ಮತ್ತು ಡಿ.ಎಸ್.ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದ್ದು, 28 ಮತಗಳನ್ನು ಪಡೆದು ಗೌರೀಶ್ ಚುನಾಯಿತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಗುರುಸ್ವಾಮಿ ಮತ್ತು ಸಿದ್ದ್ಧರಾಜು ಸ್ಪರ್ಧಿಸಿದ್ದು, 32 ಮತಗಳನ್ನು ಪಡೆದು ಸಿದ್ದರಾಜು ಆಯ್ಕೆಯಾದರು. ಕಾರ್ಯದರ್ಶಿ ಎನ್. ಶಿವಣ್ಣ, ಜಂಟಿ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಸಂಘಟನ ಕಾರ್ಯದರ್ಶಿಯಾಗಿ ಲಕ್ಷ್ಮಣ, ಖಜಾಂಚಿಯಾಗಿ ಉಮೇಶ ವಿಜೇತರಾದರು. ಆಡಳಿತ ಮಂಡಳಿಯ ನಿರ್ದೇಶಕರಾಗಿ ಅಬ್ದುಲ್ ಮಜೀದ್, ಚಂದ್ರಶೇಖರ್ ಎಚ್.ಎಸ್, ದಿವಾಕರ್, ಕೆಂಪೇಗೌಡ, ರಾಜಣ್ಣ, ಶಿವಸ್ವಾಮಿ ಎಂ.ಎಸ್, ಕೆ.ಎನ್.ವೀರಭದ್ರಸ್ವಾಮಿ ಚುನಾಯಿತರಾದರು.
ನೂತನ ಅಧ್ಯಕ್ಷ ಗೌರೀಶ್ ಮಾತನಾಡಿ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ನಮ್ಮ ತಂಡವನ್ನು ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ. ಮುಂದಿನ ಆಡಳಿತಾವಧಿಯಲ್ಲಿ ಎಲ್ಲರ ವಿಶ್ವಾಸ ಗಳಿಸಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಚುನಾವಣಾಧಿಕಾರಿಯಾಗಿ ಮುರಳಿ ಕಾರ್ಯ ನಿರ್ವಹಿಸಿದರು. ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸಂಘದ ಸದಸ್ಯರು ಅಭಿನಂದಿಸಿದರು. ಮದ್ದೂರು ಸಂಘದ ಅಧ್ಯಕ್ಷ ಶಿವಣ್ಣ, ಮುಖಂಡರಾದ ಮಂಜುನಾಥ್, ನಂಜುಂಡಸ್ವಾಮಿ, ರಾಜೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net