ಆಲಗೂಡು ಗ್ರಾಮದಲ್ಲಿ 9 ಕೂಟಗಳ ದೇವರ ಉತ್ಸವ

ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದಲ್ಲಿ ಭಾನುವಾರ 9 ಕೂಟಗಳ ದೇವರ ಉತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದಲ್ಲಿ ಭಾನುವಾರ 9 ಕೂಟಗಳ ದೇವರ ಉತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
Published on
ಶ್ರೀರಂಗಪಟ್ಟಣ: ತಾಲೂಕಿನ ಆಲಗೂಡು ಗ್ರಾಮದಲ್ಲಿ 9 ಕೂಟಗಳ ದೇವರ ಉತ್ಸವ ಹಾಗೂ ಪರ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಯುಗಾದಿ ಹಬ್ಬದಂದು ಜೀವನದಿ ಕಾವೇರಿಯಿಂದ ಮೈಸೂರಿನ ಕಾಳಿಸಿದ್ದನಹುಂಡಿ ಗ್ರಾಮದ ಬೀರೇಶ್ವರ, ತಾಲೂಕಿನ ಆಲಗೂಡು ಗ್ರಾಮದ ಸಿದ್ದೇಶ್ವರ ಮತ್ತು ಬೀರೇಶ್ವರ, ಹುಂಜನಕೆರೆಯ ಚನ್ನೇಶ್ವರ, ಹೆಬ್ಬಾಡಿಹುಂಡಿಯ ಬೀರೇಶ್ವರ, ಬಳ್ಳೇಕೆರೆ ಹುಚ್ಚೂರಾಯ, ಅಲ್ಲಾಪಟ್ಟಣ ಗ್ರಾಮದ ಅನ್ನದಾನೇಶ್ವರಸ್ವಾಮಿ ಹಾಗೂ ಮಂಡ್ಯ ತಾಲೂಕಿನ ಉರುಮಾರ ಕಸಲಗೆರೆ ಉರುಮಾರಮ್ಮ ದೇವರು ಹಾಗೂ ಬಳ್ಳೆಕೆರೆ ಗ್ರಾಮದ ಬಸವೇಶ್ವರ ಸ್ವಾಮಿ ದೇವರ ಉತ್ಸವವನ್ನು ಹೊತ್ತು ಹುಂಜನಕೆರೆ ಗ್ರಾಮದ ಶಂಕರಮಾಳಕ್ಕೆ ತಮಟೆ ನಗಾರಿ ಮತ್ತು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು.
ಭಯಭಕ್ತಿಯಿಂದ ಪ್ರಾರ್ಥಿಸಿ, ಹೂವು-ಹೊಂಬಾಳೆ ತೋರಿ, ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಗ್ರಾಮಸ್ಥರ ಮನೆಗಳಿಂದ ಹಣ್ಣು-ಕಾಯಿಗಳಿಂದ ಪೂಜಾರ್ಪಣೆ ಪಡೆದು, ಮಾರನೇ ದಿನ ಅನ್ನಸಂತರ್ಪಣೆಯ ಪರ ನೆರವೇರಿಸಲಾಯಿತು.
ಶನಿವಾರ ಸಂಜೆ ಆಲಗೂಡು ಗ್ರಾಮಕ್ಕೆ ದೇವರ ಉತ್ಸವಗಳನ್ನು ಪೂಜಾ ಕುಣಿತ, ದೇವರ ಕುಣಿತ ಹಾಗೂ ಜಾನಪದ ಕಲಾತಂಡಗಳೊಂದಿಗೆ ಸಾವಿರಾರು ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ತಂದು ಗ್ರಾಮದಲ್ಲಿ ಉತ್ಸವ ನೆರವೇರಿಸಲಾಯಿತು. ತಡರಾತ್ರಿಯಿಂದ ಮುಂಜಾನೆವರೆಗೂ ದೇವರ ಮೆರವಣಿಗೆ ನಡೆಸಿ, ಭಾನುವಾರ ಗ್ರಾಮದ ರಂಗದಲ್ಲಿ ಸಹಸ್ರಾರು ಭಕ್ತರು ಮತ್ತು ಗ್ರಾಮಸ್ಥರಿಗೆ ಬೃಹತ್ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮದ ಯಜಮಾನರಾದ ನಾಗರಾಜು, ಸೋಮಣ್ಣ, ಸಿದ್ದೇಗೌಡ, ರಾಮಕೃಷ್ಣ, ಗವಿಸಿದ್ದೇಗೌಡ, ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net