ಬೀದಿನಾಯಿಗಳ ದಾಳಿಗೆ ಮೇಕೆಗಳು ಬಲಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಳವಳ್ಳಿ: ತಾಲೂಕಿನ ಬೋಪ್ಪೇಗೌಡನಪುರ (ಬಿ.ಜಿ.ಪುರ) ಗ್ರಾಮದಲ್ಲಿ ಬುಧವಾರ ಬೀದಿ ನಾಯಿಗಳ ದಾಳಿಗೆ ಮೂರು ಮೇಕೆಗಳು ಬಲಿಯಾಗಿವೆ.
ಗ್ರಾಮದ ಹೊಂಬಾಳಮ್ಮ ಎಂಬುವರ ಮೇಕೆಗಳು ಸಾವಿಗೀಡಾಗಿವೆ. ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಹತ್ತಕ್ಕೂ ಹೆಚ್ಚು ಮೇಕೆಗಳನ್ನು ಕೂಡಿಹಾಕಲಾಗಿತ್ತು. ಈ ವೇಳೆ ಬೀದಿನಾಯಿಗಳು ಕೊಟ್ಟಿಗೆಯೊಳಗೆ ನುಗ್ಗಿ ದಾಳಿ ನಡೆಸಿ ಮೇಕೆಗಳನ್ನು ಕಡಿದು ಎಳೆದಾಡಿವೆ. ಕೂಡಲೇ ಮನೆಯೊಳಗಿದ್ದ ಕುಟುಂಬಸ್ಥರು ಧಾವಿಸಿ ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಿ 3 ಮೇಕೆಗಳು ಮೃತಪಟ್ಟಿದ್ದವು ಎನ್ನಲಾಗಿದೆ.
ಸ್ಥಳಕ್ಕೆ ಪಶು ಪಾಶುಪಾಲನೆ ಇಲಾಖೆ ವೈದ್ಯರು ಆಗಮಿಸಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net