ಹತ್ತು ಮೇಕೆಗಳನ್ನು ಸಾಕಿದ್ದ ಶಂಭಯ್ಯ, ಎಂದಿನಂತೆ ಜಮೀನಿನಲ್ಲಿ ಮೇಯಿಸಿಕೊಂಡು ಮನೆಯ ಮುಂಭಾಗದ ಕೊಟ್ಟಿಗೆಯಲ್ಲಿ ಕೂಡಿದ್ದರು. ತಡರಾತ್ರಿ ಎಂಟು ಬೀದಿ ನಾಯಿಗಳ ಗುಂಪು ಕೊಟ್ಟಿಗೆಯೊಳಗೆ ನುಗ್ಗಿ ಮೇಕೆಗಳನ್ನು ಕಡಿದು ಎಳೆದಾಡಿವೆ. ಮೇಕೆಗಳ ಚೀರಾಟ ಕೇಳಿ ಮನೆಯಿಂದ ಹೊರಬಂದ ಮಾಲೀಕ ನಾಯಿಗಳನ್ನು ಓಡಿಸಿದ್ದು, ಅಷ್ಟರಲ್ಲಾಗಲೇ ತೀವ್ರವಾಗಿ ಗಾಯಗೊಂಡಿದ್ದ ನಾಲ್ಕು ಮೇಕೆಗಳು ಸಾವನ್ನಪ್ಪಿದ್ದವು. ಮಂಗಳವಾರ ಪಶುಪಾಲನೆ ಇಲಾಖೆ ವೈದ್ಯರು ಸ್ಥಳಕ್ಕೆ ಆಗಮಿಸಿ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಿದ್ದು, ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.