ಸರ್ವತೋಮುಖ ವಿಕಸನ ಶಿಕ್ಷಣದ ಗುರಿಯಾಗಲಿ

ಎಂ.ಎಚ್.ಚನ್ನೇಗೌಡವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರು
Published on

ಮದ್ದೂರು: ಶಾಲಾ-ಕಾಲೇಜು ಹಂತದಲ್ಲಿ ಆಯೋಜಿಸುವ ಸಾಂಸ್ಕೃತಿಕ ಸ್ಪರ್ಧೆಗಳು ಕೇವಲ ಮನರಂಜನೆಯ ಸಾಧನವಾಗಿರದೆ ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತರಲು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಡುವ ಜತೆಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಎಂ.ಎಚ್.ಚನ್ನೇಗೌಡವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರು ಹೇಳಿದರು.

ನಗರದ ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಡ್ಯ ಹಾಗೂ ಎಂ.ಎಚ್. ಚನ್ನೇಗೌಡ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಮದ್ದೂರು ತಾಲೂಕು ಮಟ್ಟದ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಎಂದರೆ ಕೇವಲ ಪುಸ್ತಕದ ಓದು ಅಥವಾ ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮಾತ್ರವಲ್ಲ ವಿದ್ಯಾರ್ಥಿಯ ಸರ್ವತೋಮುಖ ವಿಕಾಸನವಾಗಬೇಕು ಎಂದ ಅವರು, ವಿದ್ಯಾರ್ಥಿಗಳ ಜೀವನದಲ್ಲಿ ಸ್ಪರ್ಧೆ ಮುಖವೇ ಹೊರತು ಸೋಲು- ಗೆಲುವು ಮುಖ್ಯವಲ್ಲ ಎಂದರು.

ವಿದ್ಯಾರ್ಥಿಗಳು ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರು ಏನಾದರೂ ಒಂದು ಹೊಸದನ್ನು ಕಲಿತುಕೊಳ್ಳುವ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಸ್ವರೂಪ ಚಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಮಾಜದ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಪ್ರಸ್ತುತ ಆಧುನಿಕ ಯುಗದಲ್ಲಿ ಜಾಗತೀಕರಣ ಮತ್ತು ತಂತ್ರಜ್ಞಾನದ ಅಬ್ಬರದ ನಡುವೆ ನಮ್ಮ ಶ್ರೀಮಂತ ಪರಂಪರೆಯನ್ನು ಬೆಳೆಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳು ಅತ್ಯುತ್ತಮ ಪಾತ್ರ ವಹಿಸುವ ಜತೆಗೆ ಬದುಕಿನ ಮೌಲ್ಯಗಳು ಕಲಿಸುವ ಪಾಠ ಶಾಲೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ನೋಡಲ್ ಕೇಂದ್ರದ ಪ್ರಾಂಶುಪಾಲರಾದ ಎ.ಸಿ.ಗೀತಾ, ಎಚ್‌ಕೆವಿ ಪಿಯು ಕಾಲೇಜು ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಮದ್ದೂರು ತಾಲೂಕು ನೌಕರರ ಸಂಘದ ಅಧ್ಯಕ್ಷ ಬಿ.ಅಂಕೆಗೌಡ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಸಿ.ಸತೀಶ್, ಎಚ್.ಕೆ.ವಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಸ್.ಪಿ.ಕಿರಣ್, ಪ್ರಾಂಶುಪಾಲರಾದ ಬಂಗಾರ ನಾಯಕ, ಹುಚ್ಚಯ್ಯ, ಶಿವಕುಮಾರ್, ಹನುಮಂತ ರಾಯಪ್ಪ, ಶಿವರಾಜು, ಪಿ.ಸಿ.ಪ್ರವೀಣ್ ಕುಮಾರ್, ಪ್ರದೀಪ್, ಪ್ರವೀಣ್, ಪಲ್ಲವಿ, ವೆಂಕಟೇಶ್, ಸುಮತಿ, ಸೋಮಶೆಟ್ಟಿ, ಆನಂದ್, ನಾಗೇಶ್ ಇತರರು ಇದ್ದರು.

22ಎಂಡಿಆರ್6: ಮದ್ದೂರು ನಗರದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮದ್ದೂರು ತಾಲೂಕು ಮಟ್ಟದ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಎಂ.ಎಚ್.ಚನ್ನೇಗೌಡವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರು ಉದ್ಘಾಟಿಸಿದರು. ಸ್ವರೂಪ್ ಚಂದ್, ಎಂ.ಸಿ.ಗೀತಾ, ಯು.ಎಸ್.ಶಿವಕುಮಾರ್, ಅಂಕೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net