ಸ್ವರ್ಣ ಬಿಂದು ಪ್ರಾಶನ ಲಸಿಕೆ ನೀಡಿ

ಪಾಂಡವಪುರ ತಾಲೂಕಿನ ಬೇಬಿಗ್ರಾಮದ ಶ್ರೀದುರ್ದಂಡೇಶ್ವರ ಮಠದ ಲಿಂಗೈಕ್ಯ ಮರೀದೇವರು ಸ್ವಾಮೀಜಿಗಳ ಗದ್ದುಗೆ ಬಳಿ ಡಿಎಂಎಸ್ ಜ್ಞ್ಞಾನ ಕುಟೀರ ಶಾಲೆ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನವನ್ನು ಡಾ.ಶ್ರೀತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಹಾಕಿದರು. ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ,  ಚಿಕ್ಕತಿಮ್ಮಯ್ಯ, ಡಾ.ನಾಗೇಶ್ ಇತರರಿದ್ದರು.
ಪಾಂಡವಪುರ ತಾಲೂಕಿನ ಬೇಬಿಗ್ರಾಮದ ಶ್ರೀದುರ್ದಂಡೇಶ್ವರ ಮಠದ ಲಿಂಗೈಕ್ಯ ಮರೀದೇವರು ಸ್ವಾಮೀಜಿಗಳ ಗದ್ದುಗೆ ಬಳಿ ಡಿಎಂಎಸ್ ಜ್ಞ್ಞಾನ ಕುಟೀರ ಶಾಲೆ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನವನ್ನು ಡಾ.ಶ್ರೀತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಹಾಕಿದರು. ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕತಿಮ್ಮಯ್ಯ, ಡಾ.ನಾಗೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿಕೆ
ಪಾಂಡವಪುರ: ಮಕ್ಕಳ ಮಾನಸಿಕ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗಾಗಿ ಸರ್ಕಾರಗಳು ಪಲ್ಸ್ ಪೋಲಿಯೋ ಲಸಿಕೆ ಮಾದರಿಯಲ್ಲಿ ಶಾಲೆಗಳಲ್ಲಿ ಸ್ವರ್ಣ ಬಿಂದು ಪ್ರಾಶನ ಲಸಿಕೆ ಹಾಕಬೇಕು ಎಂದು ಚಂದ್ರವನ ಆಶ್ರಮ, ಬೇಬಿಗ್ರಾಮದ ಶ್ರೀದುರ್ದಂಡೇಶ್ವರದ ಮಠದ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ತಾಲೂಕಿನ ಬೇಬಿ ಗ್ರಾಮದ ಶ್ರೀದುರ್ದಂಡೇಶ್ವರ ಮಠದ ಆವರಣದಲ್ಲಿ ಇರುವ ಲಿಂಗೈಕ್ಯ ಶ್ರೀಮರೀದೇವರು ಸ್ವಾಮೀಜಿ ಗದ್ದುಗೆ ಆವರಣದಲ್ಲಿ ಆದಿ ಆಯುರ್ವೇದ ಆಸ್ಪತ್ರೆ, ಡಿಎಂಎಸ್ ಚಂದ್ರವನ ಆಶ್ರಮದ ಸಹಯೋಗದಲ್ಲಿ ಡಿಎಂಎಸ್ ಜ್ಞಾನಕುಟೀರ ಶಾಲೆಯ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಹಾಕಿ ಬಳಿಕ ಮಾತನಾಡಿದರು.
ದೇವ ಋಷಿಗಳ ಆಶ್ರಮದಲ್ಲಿ ಆಯುರ್ವೇದ ಶಾಸ್ತ್ರ ಸ್ವರ್ಣಬಿಂದು ಪ್ರಾಶನ ಎನ್ನುವುದು ಬಹಳಮುಖ್ಯವಾಗಿತ್ತು. ಸ್ವರ್ಣಬಿಂದು ಪ್ರಾಶನ ಹಾಕುವುದರಿಂದ ಮಕ್ಕಳ ಮಾನಸಿಕ, ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಬಹಳ ಪ್ರಮುಖವಾಗಲಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಜ್ಞಾಪಕ ಶಕ್ತಿ, ಮಾನಸಿಕ ಶಕ್ತಿ ವೃದ್ಧಿಸಲೆಂದು ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಲಸಿಕೆ ನೀಡಲಾಗುತ್ತದೆ. ಹಾಗಾಗಿ ನಮ್ಮ ಸರ್ಕಾರಗಳು ಸಹ ಪಲ್ಸ್ ಪೋಲಿಯೋ ಲಸಿಕೆ ಮಾದರಿಯಲ್ಲಿ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಹಾಕುವ ಹೊಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲು ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಮಠಗಳು ನಡೆಸುತ್ತಿರುವ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ತ್ರಿನೇತ್ರಸ್ವಾಮೀಜಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವಿದ್ಯಾರ್ಥಿ ದೊಡ್ಡಮಟ್ಟದ ಸಾಧನೆ ಮಾಡಬೇಕು ಎಂಬ ಗುರಿ ಹೊಂದಬೇಕು. ಮುಂಜಾನೆ ಬೇಗನೆ ಎದ್ದು ಓದುವ, ಯೋಗ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂಸ್ಕೃತಿಯ ಜತೆಗೆ ಸಂಸ್ಕಾರ ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಡಿಎಂಎಸ್ ಶಾಲೆಯ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಆದಿ ಆಯುರ್ವೇದ ಆಸ್ಪತ್ರೆ ಡಾ.ನಾಗೇಶ್, ಡಾ.ಸುಜನಾ, ಉದ್ಯಮಿ ರಂಗರಾಜು, ಸುಮಸಂಜಯ್, ವಿಶ್ವನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net