ಗಮಕ ಕಲೆ ಭಾರತೀಯ ಸಂಸ್ಕೃತಿಯ ಅಸ್ಮಿತೆ: ಮನ್‌ಮುಲ್ ಮಾಜಿ ನಿರ್ದೇಶಕಿ ವಿ.ಸುಜಾತಾ ಕೃಷ್ಣ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ಮನ್‌ಮುಲ್ ಮಾಜಿ ನಿರ್ದೇಶಕಿ ವಿ.ಸುಜಾತಾ ಕೃಷ್ಣ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ಮನ್‌ಮುಲ್ ಮಾಜಿ ನಿರ್ದೇಶಕಿ ವಿ.ಸುಜಾತಾ ಕೃಷ್ಣ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾಗಣಪತಿ ದೇವಾಲಯದ ಆವರಣದಲ್ಲಿ ಕಾರ್ಯಕ್ರಮ
  • ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಜಿಲ್ಲಾ ಗಮಕ ಕಲಾ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೇವಸ್ಥಾನ ಟ್ರಸ್ಟ್ ನಿಂದ ಆಯೋಜನೆ
ಮಂಡ್ಯ: ಆದಿ ಕವಿ ವಾಲ್ಮೀಕಿಯಿಂದ ಆರಂಭವಾದ ಗಮಕ ಕಲೆ ಭಾರತೀಯ ಸಂಸ್ಕೃತಿಯ ಅಸ್ಮಿತೆಯಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮನ್‌ಮುಲ್ ಮಾಜಿ ನಿರ್ದೇಶಕಿ ವಿ.ಸುಜಾತಾ ಕೃಷ್ಣ ಸಲಹೆ ನೀಡಿದರು.
ನಗರದ ಶ್ರೀ ವಿದ್ಯಾಗಣಪತಿ ದೇವಾಲಯದ ಆವರಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಜಿಲ್ಲಾ ಗಮಕ ಕಲಾ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯದಿಂದಲೇ ಮಕ್ಕಳಿಗೆ ಕಾವ್ಯ ವಾಚನ ಮತ್ತು ಕಲೆಗಳ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಸಮಾಜದ ಸತ್ಪ್ರಜೆಯಾಗಲು ಉತ್ತಮ ಅಡಿಪಾಯ ಹಾಕಿಕೊಟ್ಟಂತಾಗುತ್ತದೆ. ಇದು ನಮೆಲ್ಲರ ಹೊಣೆಗಾರಿಕೆ ಕೂಡಾ ಎಂದು ಹೇಳಿದರು.
ಸಂಗೀತ, ಗಮಕ ಲಲಿತ ಕಲೆಗಳು ಮನುಷ್ಯನ ಭಾವನೆಗಳನ್ನು ಅರಳಿಸಿ ದೇಶಕ್ಕೆ ಉತ್ತಮ ಕೊಡುಗೆಗಳನ್ನಾಗಿ ರೂಪಿಸುತ್ತದೆ. ಮೊಬೈಲ್ ಸೇರಿದಂತೆ ಅತ್ಯಾಧುನಿಕ ಡಿಜಿಟಲ್ ಪಿಡುಗಿನಿಂದ ಹೊರ ಬರಲು ಸಮಾಜ ಮುಖಿಯಾಗಿ ಮಕ್ಕಳು ಹಾಗೂ ಯುವ ಜನರನ್ನು ತೊಡಗಿಸಿಕೊಳ್ಳಲು ಗಮಕ, ಕಾವ್ಯಗಳ ಅರಿವು, ಕಲೆಗಳ ಮಹತ್ವ ಪರಿಚಯಿಸುವಿಕೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯ. ದೇಶದ ಗುರುತಿಸುವಿಕೆಗೆ ಅದರ ಸಂಸ್ಕೃತಿ ಕಾರಣವಾಗುತ್ತದೆ. ಇಂತಹ ಗುಣಮಟ್ಟದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಆಗ ಮಾತ್ರ ಸಂಸ್ಕೃತಿ, ಕಲೆಯ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ವಿದ್ಯಾಗಣಪತಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಲಿಂಗೇಗೌಡ, ಕಾರ್ಯದರ್ಶಿ ಕೃಷ್ಣಮೂರ್ತಿ, ಸದಸ್ಯ ಬಸವರಾಜ್, ಗಮಕಿ ವಿದ್ಯಾಶಂಕರ್ ಉಪಸ್ಥಿತರಿದ್ದರು. ಯುವ ಗಮಕಿ ರಮೇಶ್ ಬಡಿಗೇರ್ ಕುಮಾರವ್ಯಾಸ ಭಾರತದ ಕರ್ಣ ಛೇದನ ಕಾವ್ಯ ಭಾಗವನ್ನು ವಾಚಿಸಿದರು. ಗಮಕಿ ಎಸ್.ಶ್ರೀನಿವಾಸ ಶೆಟ್ಟಿ ಅವರ ವಿದ್ವತ್ ಪೂರ್ಣ ವ್ಯಾಖ್ಯಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net