ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ಬೋರೇದೇವರ ದೇಗುಲ ವೃತ್ತದಲ್ಲಿ ಮಂಗಳವಾರ ಅರಕೆರೆ ಹೋಬಳಿಯ ವಿವಿಧ ಗ್ರಾಮಗಳ ಅಭಿಮಾನಿಗಳು ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಅಭಿಮಾನದ ಗೌರವ ಸ್ವೀಕರಿಸುವ ಜತೆಗೆ ಕೇಕ್ ಕತ್ತರಿಸಿ ಸಿಹಿ ಹಂಚಿದರು.
Published on:
Copied
Follow Us
ಶ್ರೀರಂಗಪಟ್ಟಣ:ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಗಳ ಜನರು ತಮ್ಮ ಮನೆ ಮಗನಂತೆ ನನಗೆ ತೋರುತ್ತಿರುವ ಪ್ರೀತಿಗೆ ಸದಾ ನಾನು ಚಿರಋಣಿಯಾಗಿದ್ದು, ಯಾವುದೇ ಅಧಿಕಾರವಿಲ್ಲದೆ ನಿಮ್ಮ ಪ್ರೀತಿ ಗಳಿಸಿರುವುದು ನನ್ನ ಭಾಗ್ಯ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.
ತಾಲೂಕಿನ ಕೊಡಿಯಾಲ ಗ್ರಾಮದ ಬೋರೇದೇವರ ದೇಗುಲ ವೃತ್ತದಲ್ಲಿ ಮಂಗಳವಾರ ಅರಕೆರೆ ಹೋಬಳಿಯ ವಿವಿಧ ಗ್ರಾಮಗಳ ಅಭಿಮಾನಿಗಳು ಮಂಗಳವಾರ ಹಮ್ಮಿಕೊಂಡಿದ್ದ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಅಭಿಮಾನದ ಗೌರವ ಸ್ವೀಕರಿಸುವ ಜತೆಗೆ ಕೇಕ್ ಕತ್ತರಿಸಿ ಸಿಹಿ ಹಂಚಿದ ಬಳಿ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಸಮಾಜಮುಖಿ ಚಿಂತನೆ ಹೊತ್ತು ಸಾಕಷ್ಟು ಕಾರ್ಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿಕೊಂಡು ಬಂದಿದ್ದು, ಎಲ್ಲ್ಲ ಗ್ರಾಮಗಳು ಜನರು ತೋರುವ ಪ್ರೀತಿ, ಆ ಮಮತೆ, ಸಹಕಾರ ನನ್ನಲ್ಲಿ ಹೊಸ ಚೈತನ್ಯ ನೀಡಿದೆ. ಒಬ್ಬ ವ್ಯಕ್ತಿ ಅಧಿಕಾರ ಇರಲಿ, ಇಲ್ಲದಿರಲಿ ನಿಜವಾಗಿಯೂ ಸ್ವಾರ್ಥರಹಿತವಾಗಿ ತನ್ನ ಸೇವಾ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ಜನರೇ ಆತನ ಶಕ್ತಿಯಾಗುತ್ತಾರೆ ಎಂಬ ನಂಬಿಕೆ ನನ್ನ ವಿಚಾರದಲ್ಲಿ ಸತ್ಯವಾಗಿದೆ. ನನ್ನ ಅಜ್ಜಿಯೂ ಸಹ ಅರಕೆರೆ ಹೋಬಳಿಯವರೇ. ಇಂದು ಕೊಡಿಯಾಲದಲ್ಲಿ ಅರಕರೆ ಹೋಬಳಿ ಜನರು ನನಗೆ ನೀಡಿರುವ ಈ ಸನ್ಮಾನ ತವರಿನ ಪ್ರೀತಿ ತುಂಬಿದಂತಿದೆ. ನನ್ನ ಹುಟ್ಟುಹಬ್ಬವನ್ನು ನಿಮ್ಮೆಲ್ಲರ ಪ್ರೀತಿಯೊಂದಿಗೆ ಸಾರ್ಥಕಗೊಳಿಸಿದ್ದಕ್ಕೆ ಧನ್ಯವಾದ ಎಂದರು.
ಕೊಡಿಯಾಲ, ತಡಗವಾಡಿ, ಚಿಕ್ಕಹಾರೋಹಳ್ಳಿ, ದೊಡ್ಡಹಾರೋಹಳ್ಳಿ, ಹುಣಸನಹಳ್ಳಿ, ಪೀಹಳ್ಳಿ, ಚೊಟ್ಟನಹಳ್ಳಿ, ಆಲಗೂಡು, ಗರ್ಕಹಳ್ಳಿ, ಬಳ್ಳೆಕೆರೆ, ಅರಕೆರೆ ಸೇರಿದಂತೆ ಅರಕೆರೆ ಹೋಬಳಿಯ ಹಲವು ಗ್ರಾಮಗಳ ಹಿರಿಯ ಮುಖಂಡರು ಮತ್ತು ಯುವ ಅಭಿಮಾನಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.