ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಕೆಂಪೇಗೌಡ ಜಯಂತಿಯ ಅಂಗವಾಗಿ ಬೆಂಗಳೂರಿನ ಧೀನಬಂಧು ನಿಧಿ ಟ್ರಸ್ಟ್ ಅಧ್ಯಕ್ಷ ರಘುರಾಮ್ ಉಚಿತ ನೋಟ್ ಬುಕ್, ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಕೃಷ್ಣೇಗೌಡ, ಟಿ.ರವೀಂದ್ರ, ಶ್ರೀನಿವಾಸ, ಪ್ರಿಯದರ್ಶಿನಿ ಇದ್ದರು.
ಮದ್ದೂರು:ನಾಡಪ್ರಭು ಕೆಂಪೇಗೌಡ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಧೀನ ಬಂಧುನಿಧಿ ಟ್ರಸ್ಟ್ ಆಧ್ಯಕ್ಷ ರಘುರಾಮ್ ತಿಳಿಸಿದರು.
ತಾಲೂಕಿನ ಆಬಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಕೆಂಪೇಗೌಡ ಜಯಂತಿಯ ಅಂಗವಾಗಿ ಬೆಂಗಳೂರಿನ ಧೀನಬಂಧುನಿಧಿ ಟ್ರಸ್ಟ್ ವತಿಯಿಂದ ಉಚಿತ ನೋಟ್, ಕಲಿಕಾ ಸಾಮಾಗ್ರಿಗಳನ್ನು ಶನಿವಾರ ವಿತರಿಸಿ ಮಾತನಾಡಿದರು.
ಕೆಂಪೇಗೌಡರು ಕೆರೆ, ಕಟ್ಟೆಗಳ ನಿರ್ಮಾಣ, ದೇಗುಲಗಳ ನಿರ್ಮಾಣ, ಪೇಟೆಗಳ ನಿರ್ಮಾಣ ಸೇರಿದಂತೆ ಹಲವಾರು ಅನನ್ಯ ಕೊಡುಗೆಗಳನ್ನು ನೀಡುವ ಮೂಲಕ ಬೆಂಗಳೂರು ಇಂದು ವಿಶ್ವ ಭೂಪಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ತೋಪಿನ ತಿಮ್ಮಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಟಿ.ರವೀಂದ್ರ, ಟ್ರಸ್ಟಿಗಳಾದ ಶ್ರೀನಿವಾಸ, ಪ್ರಿಯದರ್ಶಿನಿ, ಪ್ರಿಯಾ, ವಿನಯ್, ಗೋವಿಂದಯ್ಯ, ಮುಖ್ಯ ಶಿಕ್ಷಕರಾದ ಭಾಗ್ಯಮ್ಮ, ಅಕ್ಷತ್ ಇತರರು ಇದ್ದರು.