ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜಿ.ಟಿ.ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ಡಿ.ಬಿ.ಚಂದ್ರೇಗೌಡ, ಜಾನಪದ ವಿದ್ವಾಂಸ ಎಂ.ಭೈರೇಗೌಡ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ. ಸ್ವಾಮಿ, ಕರ್ನಾಟಕ ವಿಕಾಸರಂಗ ಅಧ್ಯಕ್ಷ ಪ್ರೊ.ಪಿ.ಡಿ.ತಿಮ್ಮಪ್ಪ, ಕನ್ನಿಕಾಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಚ್.ಆರ್.ಕನ್ನಿಕಾ, ಸಂಚಾಲಕರಾದ ಕೃಷ್ಣೇಗೌಡ ಕೀಲಾರ, ಎಚ್.ಬಿ. ರಾಮಕೃಷ್ಣ ಇತರರಿದ್ದರು. ಇದೇ ವೇಳೆ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೋಲಾಟ ಕಲಾವಿದ ಹೊನ್ನಯ್ಯ ತಳಗವಾದಿ ಮತ್ತು ಚುಂಚಶ್ರೀ ಪ್ರಶಸ್ತಿ ಪುರಸ್ಕೃತ ಮದ್ದೂರು ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮದ ಸಿದ್ದೇಗೌಡ ಅವರನ್ನು ಅಭಿನಂದಿಸಲಾಯಿತು.